ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಶಾಲೆಗಳನ್ನು ಮಾಂಸ ಮಾರಾಟದ ಕೇಂದ್ರವಾಗಿಸುವ ಹುನ್ನಾರ: ಕೋಡಿಹಳ್ಳಿ ಆರೋಪ

Last Updated 20 ಸೆಪ್ಟೆಂಬರ್ 2021, 15:50 IST
ಅಕ್ಷರ ಗಾತ್ರ

ಲಿಂಗಸುಗೂರು: ‘ಗೋಶಾಲೆಗಳನ್ನು ಆರಂಭಿಸಲು ಉತ್ತೇಜನ ನೀಡುತ್ತಿರುವ ಕೇಂದ್ರ, ರಾಜ್ಯ ಸರ್ಕಾರಗಳು ಪರೋಕ್ಷವಾಗಿ ಜಾನುವಾರು ಮಾಂಸ ಮಾರಾಟದ ಕೇಂದ್ರಗಳನ್ನಾಗಿಸುವ ಹುನ್ನಾರ ನಡೆಸಿವೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಆರೋಪಿಸಿದರು.

ಸೋಮವಾರ ಲಿಂಗಸುಗೂರ ಎಪಿಎಂಸಿ ಆವರಣದಲ್ಲಿ ಆಯೋಜಿಸಿದ್ದ ರೈತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ರಾಷ್ಟ್ರದಲ್ಲಿ ವಿದೇಶಗಳಿಗೆ ಜಾನುವಾರು (ಬೀಫ್‍) ಮಾಂಸ ರಫ್ತು ಮಾಡುವ 17 ಏಜೆನ್ಸಿಗಳಿವೆ. ಆ ಪೈಕಿ ಒಂದು ಮಾತ್ರ ಮುಸ್ಲಿಂ ವ್ಯಕ್ತಿಯ ಮಾಲಿಕತ್ವದ ಏಜೆನ್ಸಿಯಿದೆ. ಉಳಿದಂತೆ 16 ಏಜೆನ್ಸಿಗಳು ಜೈನ ಮತ್ತು ಬ್ರಾಹ್ಮಣ ಸಮುದಾಯದ ಮಾಲೀಕತ್ವದಲ್ಲಿವೆ. ಎಲ್ಲ ಏಜೆನ್ಸಿಗಳು ಕಾಂಗ್ರೆಸ್‍, ಬಿಜೆಪಿ ಕೃಪಾಕಟಾಕ್ಷದಲ್ಲಿ ಕಾರ್ಯನಿರ್ವಹಿಸುತ್ತಿವೆ’ ಎಂದರು.

‘ರಾಜ್ಯದಲ್ಲಿ ಗೋಹತ್ಯೆ ನಿಯಂತ್ರಣ ಕಾಯ್ದೆ ಬದಲು, ಜಾನುವಾರುಗಳ ಮಾರಾಟ ನಿಯಂತ್ರಣ ಕಾಯ್ದೆ ಜಾರಿಗೆ ತರಲು ಯತ್ನ ನಡೆದಿದೆ. ಈ ನೆಪದಲ್ಲಿ ಜಾನುವಾರು ಸಾಕಿದ ರೈತರ ಮೇಲೆ ಕ್ರಿಮಿನಲ್‍ ಮೊಕದ್ದಮೆ ದಾಖಲಿಸಲು ಹುನ್ನಾರ ನಡೆಸಲಾಗುತ್ತಿದೆ. ಸರ್ಕಾರ 15 ದಿನದೊಳಗೆ ಕ್ರಿಮಿನಲ್‍ ಮೊಕದ್ದಮೆ ವಾಪಸ್‌ ಪಡೆಯಬೇಕು. ಇಲ್ಲದೆ ಹೋದಲ್ಲಿ ರಾಜ್ಯವ್ಯಾಪಿ ಹೋರಾಟ ಚುರುಕುಗೊಳಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT