ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಮಗುವಿಗೆ ತಾಯಿ ಎದೆಹಾಲು ಅಮೃತ

Last Updated 5 ಆಗಸ್ಟ್ 2020, 13:52 IST
ಅಕ್ಷರ ಗಾತ್ರ

ರಾಯಚೂರು: ಹುಟ್ಟಿದ ಮಗುವಿಗೆ ತಾಯಿ ಕೊಡುವ ಎದೆಹಾಲು ಅಮೃತವಾಗಿರುತ್ತದೆ ಎಂದು ಪಿಎಫ್‌ಎಐ ಸಂಪನ್ಮೂಲ ವ್ಯಕ್ತಿ ಡಾ.ಪ್ರೀತಿ ಪಾಟೀಲ ಹೇಳಿದರು.

ನಗರದ ಭಾರತೀಯ ಕುಟುಂಬ ಯೋಜನಾ ಒಕ್ಕೂಟ (ಪಿಎಫ್‌ಎಐ)ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ತಾಯಿಯ ಮರಣ ಪ್ರಮಾಣ ಮತ್ತು ಮಕ್ಕಳ ಮರಣ ಪ್ರಮಾಣ ಕಡಿಮೆ ಮಾಡುವ ಕಾರಣ ವಿಶ್ವ ಸ್ತನಪಾನ ದಿನಾಚರಣೆಯಲ್ಲಿ ಮಾತನಾಡಿದರು.

ಮಗು ಹುಟ್ಟಿದ ಒಂದು ತಾಸಿನ ಒಳಗೆ ತಾಯಿ ಎದೆ ಹಾಲು ಕಡ್ಡಾಯವಾಗಿ ಕೊಡಬೇಕು. ಕನಿಷ್ಠ ಆರು ತಿಂಗಳವರೆಗೆ ಎದೆ ಹಾಲು ಬಿಟ್ಟು ಬೇರೆ ಏನನ್ನು ಕೊಡಬಾರದು. ಮಗುವಿಗೆ ಬರುವಂತಹ ಯಾವುದೇ ಕಾಯಿಲೆ ಇದ್ದರು ಸಹಾ ಅದನ್ನು ತಡೆಗಟ್ಟುವ ಶಕ್ತಿ ತಾಯಿಯ ಎದೆ ಹಾಲಿನಲ್ಲಿದೆ ಎಂದು ತಿಳಿಸಿದರು.

ಸ್ಟಾಫ್‌ ನರ್ಸ್‌ ಪ್ರಸನ್ನಾ ವೆಂಕಟೇಶ ಅವರು ಸ್ತನಪಾನ ಹಾಗೂ ಮಕ್ಕಳ ಅಂತರದ ವಿಧಾನಗಳ ಬಗ್ಗೆ ತಿಳಿಸಿದರು.

ಸಾಮಾಜಿಕ ಕಾರ್ಯಕರ್ತ ವೇಣುಗೋಪಾಲ ಮಾತನಾಡಿದರು. ಶಾಖಾ ವ್ಯವಸ್ಥಾಪಕ ವಾಗೀಶ ಎಚ್‌.ಎಂ. ಅಧ್ಯಕ್ಷತೆ ವಹಿಸಿದ್ದರು. ಎಫ್.ಪಿ.ಎ.ಐ ಕಾರ್ಯಕ್ರಮಾಧಿಕಾರಿ ಶೇಷಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಶಾ ಕಾರ್ಯಕರ್ತೆ ಮುಭೀನಾ ಸ್ವಾಗತಿಸಿದರು. ಆಶಾ ಕಾರ್ಯಕರ್ತೆ ಬಿ.ವಿಜಯಲಕ್ಷ್ಮೀ ವಂದಿಸಿದರು.

ಎಫ್.ಪಿ.ಎ.ಐ ಸಿಬ್ಬಂದಿ ವನಿತಾ, ಭೂಷಣಗೌಡ್, ಗುರುನಾಥ, ಜಗನ್ನಾಥರಾವ, ಶ್ರೀನಿವಾಸ ಮತ್ತು ಆಶಾ ಕಾರ್ಯಕರ್ತೆಯಾರದ ಹಂಪಮ್ಮ, ಪುಷ್ಪಾವತಿ, ವಿಮಲ, ಭಾಗ್ಯಮ್ಮ, ಅನುರಾಧ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT