
ನೆರೆ ಹಾವಳಿಯಿಂದ ಪ್ರತಿ ವರ್ಷ ಬೆಳೆ ಹಾನಿ ಅನುಭವಿಸುವ ಚೀಕಲಪರ್ವಿ ಗ್ರಾಮದ ರೈತರ ನೆರವಿಗೆ ಅಧಿಕಾರಿಗಳು ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು
– ರುದ್ರಗೌಡ, ಚೀಕಲಪರ್ವಿ ಗ್ರಾಮಸ್ಥ
ಆಸರೆ ಕಾಲೊನಿಗೆ ಸಂಪರ್ಕ ರಸ್ತೆ ಕಲ್ಪಿಸುವ ಕುರಿತು ಹದಿನೈದು ವರ್ಷಗಳಿಂದ ಶಾಸಕರು, ಜಿಲ್ಲಾಧಿಕಾರಿ, ತಹಶೀಲ್ದಾರ್ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸೂಕ್ತ ಸ್ಪಂದನೆ ದೊರೆತಿಲ್ಲ. ಈ ನಿರ್ಲಕ್ಷ್ಯ ಮುಂದುವರಿದರೆ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕರಿಸುತ್ತೇವೆ
– ದೇವರಾಜ ನಾಯಕ, ದೇವಿಪುರ ಗ್ರಾಮಸ್ಥ
ಚೀಕಲಪರ್ವಿ, ದೇವಿಪುರ ಗ್ರಾಮಗಳಲ್ಲಿ 15 ವರ್ಷಗಳ ಹಿಂದೆ ನಿರ್ಮಿಸಿದ್ದ ಆಸರೆ ಮನೆಗಳು ಪಾಳು ಬಿದ್ದಿವೆ. ಈ ಆಸರೆ ಕಾಲೊನಿಗಳಲ್ಲಿ ಮನೆಗಳ ದುರಸ್ತಿ, ರಸ್ತೆ, ಕುಡಿಯುವ ನೀರು ಸೇರಿ ಅಗತ್ಯ ಮೂಲಸೌಕರ್ಯ ಕಲ್ಪಿಸಿ ಜನರಿಗೆ ಹಂಚಿಕೆ ಮಾಡಬೇಕು
– ಹನುಮಂತಪ್ಪ ನಾಯಕ ವಕೀಲ, ದೇವಿಪುರ
ನೆರೆಪೀಡಿತ ಗ್ರಾಮಗಳ ಸ್ಥಳಾಂತರಕ್ಕಾಗಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದ ಆಸರೆ ಮನೆಗಳನ್ನು ಗ್ರಾಮಸ್ಥರಿಗೆ ಹಂಚಿಕೆ ಮಾಡುವಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಸರ್ಕಾರ ಶಿಸ್ತು ಕ್ರಮ ಜರುಗಿಸಬೇಕು..
– ನರಸಪ್ಪ ಜೂಕೂರು, ಸಾಮಾಜಿಕ ಕಾರ್ಯಕರ್ತ, ಮಾನ್ವಿಚೀಕಲಪರ್ವಿ ಗ್ರಾಮದಲ್ಲಿ ಆಸರೆ ಮನೆಯ ದುಸ್ಥಿತಿ
ಚೀಕಲಪರ್ವಿ ಗ್ರಾಮದ ಆಸರೆ ಕಾಲೊನಿಯಲ್ಲಿ ನಿರ್ಮಿಸಿದ್ದ ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್
ಚೀಕಲಪರ್ವಿ ಗ್ರಾಮದ ಐತಿಹಾಸಿಕ ವಿಜಯದಾಸರ ಕಟ್ಟೆ
ದೇವಿಪುರ ಗ್ರಾಮದಲ್ಲಿ ನಿರ್ಮಿಸಿದ್ದ ಆಸರೆ ಮನೆಗಳು