ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಹುತಾತ್ಮ ಯೋಧರ ಸ್ಮರಣೆ ಎಲ್ಲರ ಕರ್ತವ್ಯ’

ಪುಲ್ವಾಮಾ ಹುತಾತ್ಮ ಯೋಧರ ಸ್ಮರಣಾರ್ಥ ಗಿಡಗಳ ನೆಡುವ ಕಾರ್ಯ
Published 15 ಫೆಬ್ರುವರಿ 2024, 13:54 IST
Last Updated 15 ಫೆಬ್ರುವರಿ 2024, 13:54 IST
ಅಕ್ಷರ ಗಾತ್ರ

ಸಿಂಧನೂರು: ನಗರದ ಪಿಡಬ್ಲ್ಯೂಡಿ ಕ್ಯಾಂಪ್‍ನ ಸಂಚಾರ ಪೊಲೀಸ್ ಠಾಣೆಯ ಆವರಣದಲ್ಲಿ ಈಚೆಗೆ ಹುತಾತ್ಮ ಯೋಧರ ಸ್ಮರಣಾರ್ಥ ಸಂಚಾರ ಪೊಲೀಸ್ ಹಾಗೂ ವನಸಿರಿ ಫೌಂಡೇಶನ್ ಸಹಯೋಗದಲ್ಲಿ ಗಿಡಗಳ ನೆಡುವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಿವೈಎಸ್‍ಪಿ ಬಿ.ಎಸ್.ತಳವಾರ ಮಾತನಾಡಿ ‘2019ರಲ್ಲಿ  ಕಾಶ್ಮೀರದ ಪುಲ್ವಾಮಾದಲ್ಲಿ ಭದ್ರತಾ ಪಡೆಗಳ ಮೇಲೆ ನಡೆದ ಭೀಕರ ದಾಳಿಯಲ್ಲಿ 40 ಮಂದಿ ಸಿಆರ್‌ಎಫ್ ಯೋಧರು ಹುತಾತ್ಮರಾಗಿದರು. ಈ ಕಹಿ ಘಟನೆ ಎಲ್ಲ ಭಾರತೀಯರಿಗೆ ನೋವುಂಟು ಮಾಡಿದೆ. ಹುತಾತ್ಮ ಯೋಧರ ಸ್ಮರಣೆ ನಮ್ಮೆಲ್ಲರ ಕರ್ತವ್ಯ. ದೇಶಕ್ಕಾಗಿ ಪ್ರಾಣತ್ಯಾಗ ಮಾಡುವ ಯೋಧರ ಸೇವೆಗೆ ಬೆಲೆ ಕಟ್ಟಲಾಗದು. ಅದು ಅವಿಸ್ಮರಣೀಯವಾಗಿದೆ’ ಎಂದು ಅಭಿಪ್ರಾಯಪಟ್ಟರು.

ಗಿಡ-ಮರಗಳನ್ನು ಹೆಚ್ಚಾಗಿ ಬೆಳೆಸಬೇಕು. ಪರಿಸರ ಸಂರಕ್ಷಣೆಯಿಂದ ಮಾತ್ರ ಜೀವಸಂಕುಲದ ಉಳಿವು ಸಾಧ್ಯ. ಹೀಗಾಗಿ ಪರಿಸರ, ಅರಣ್ಯ ನಾಶ ಮಾಡಬಾರದು. ಪರಿಸರ ರಕ್ಷಣೆ ಕುರಿತು ವಿದ್ಯಾರ್ಥಿ ದೆಸೆಯಿಂದಲೇ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ ಎಂದು ಸಲಹೆ ನೀಡಿದರು.

ವನಸಿರಿ ಫೌಂಡೇಶನ್ ರಾಜ್ಯ ಘಟಕದ ಅಧ್ಯಕ್ಷ ಅಮರೇಗೌಡ ಮಲ್ಲಾಪುರ, ಸರ್ಕಲ್ ಇನ್‌ಸ್ಪೆಕ್ಟರ್ ಸುನೀಲ್ ವಿ.ಮೂಲಿಮನಿ, ಸಬ್‍ಇನ್‌ಸ್ಪೆಕ್ಟರ್ ಕೆ.ಕುಮಾರಸ್ವಾಮಿ, ಸಿಬ್ಬಂದಿ ಮಹಾಂತೇಶ, ಪಂಪಾಪತಿ, ಯಂಕೋಬ, ಶೋಭಾ, ರಾಧಾ, ಶಿವರಾಜ, ಹನುಮಂತ, ಫೌಂಡೇಶನ್ ಸಹಕಾರ್ಯದರ್ಶಿ ರಂಜಾನ್‍ಸಾಬ್, ಮಸ್ಕಿ ತಾಲ್ಲೂಕು ಅಧ್ಯಕ್ಷ ರಾಜು ಪತ್ತಾರ ಬಳಗಾನೂರು, ಸದಸ್ಯ ಮುದುಕಪ್ಪ ಹೊಸಳ್ಳಿ ಕ್ಯಾಂಪ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT