ರಾಯಚೂರು: ಸಹಕಾರ ಕ್ಷೇತ್ರದಲ್ಲಿ ಬ್ಯಾಂಕಿನ ವ್ಯವಹಾರ ಗಣಕೀಕರಣಗೊಳಿಸುವಲ್ಲಿ ಬಾಗಲಕೋಟೆ ಮೊದಲ ಸ್ಥಾನದಲ್ಲಿದ್ದರೆ, ರಾಯಚೂರು ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಪಾರದರ್ಶಕ ವ್ಯವಹಾರದ ಮೂಲಕ ರಾಜ್ಯದ ಉತ್ತಮ ಸಹಕಾರಿ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.

ಕೇಂದ್ರ ಸರ್ಕಾರವು ‘ಒಂದು ರಾಷ್ಟ್ರ ಒಂದು ಸಾಫ್ಟವೇರ್’ ಜಾರಿಗೊಳಿಸಿದ ನಂತರ ಬ್ಯಾಂಕಿನ ಎಲ್ಲ ವ್ಯವಹಾರವನ್ನು ದೇಶದ ಯಾವುದೇ ಭಾಗದಲ್ಲಿ ಕುಳಿತು ವೀಕ್ಷಿಸಬಹುದಾಗಿದೆ. ಈ ದಿಸೆಯಲ್ಲಿ ರಾಯಚೂರು, ಕೊಪ್ಪಳ ಕೇಂದ್ರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮಹತ್ವದ ಹೆಜ್ಜೆ ಇಟ್ಟಿದೆ.

‘ಜಿಲ್ಲೆಯಲ್ಲಿ 421 ಸೌಹಾರ್ದ ಸಹಕಾರಿ ಪೈಕಿ 381 ಸಹಕಾರಿ ಕಾರ್ಯನಿರತವಾಗಿದೆ. ₹3,227 ಕೋಟಿ ದುಡಿಯುವ ಬಂಡವಾಳ ಹೊಂದಿವೆ. ₹251 ಕೋಟಿ ಠೇವಣಿ ಇದೆ. ಸಾಫ್ಟವೇರ್ ಬಂದ ನಂತರ ವ್ಯವಹಾರದಲ್ಲಿ ಹೆಚ್ಚು ಪಾರದರ್ಶಕತೆ ಬಂದಿದೆ. ಮುಚ್ಚುಮರೆ ಮಾಡಿ ವ್ಯವಹಾರಕ್ಕೆ ಅವಕಾಶವೇ ಇಲ್ಲ. ಇದೇ ಕಾರಣಕ್ಕೆ ಹೆಚ್ಚಿನ ಪ್ರಗತಿ ಸಾಧಿಸುತ್ತಿವೆ’ ಎಂದು ರಾಯಚೂರು, ಕೊಪ್ಪಳ ಕೇಂದ್ರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಪಾಟೀಲ ತೋರಣದಿನ್ನಿ ಹೇಳುತ್ತಾರೆ.

ರಾಯಚೂರು ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಹಕಾರ ಸಂಘಗಳ ಕಾಯ್ದೆಯಡಿಯಲ್ಲಿ ಜುಲೈ 13, 1956 ರಂದು ನೋಂದಾಯಿಸಲ್ಪಟ್ಟಿದೆ. ವಾಸ್ತವದಲ್ಲಿ ಬ್ಯಾಂಕ್ 01–04–1919 ರಲ್ಲೇ ಕಾರ್ಯಾರಂಭ ಮಾಡಿದೆ. ಬ್ಯಾಂಕ್ಗೆ ಭಾರತೀಯ ರಿಸರ್ವ್ ಬ್ಯಾಂಕ್ 2011ರಲ್ಲಿ ಪರವಾನಗಿ ನೀಡಿದೆ.

ರಾಯಚೂರು–ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ‘ಒಂದು ರಾಷ್ಟ್ರ ಒಂದು ಸಾಫ್ಟವೇರ್’ ಅಳವಡಿಸಿಕೊಂಡ ನಂತರ ಪಾರದರ್ಶಕತೆ ಕಾಯ್ದುಕೊಳ್ಳಲು ಸಾಧ್ಯವಾಗಿದೆ
ಎಂ.ಬಿ.ಪೂಜಾರ್, ವ್ಯವಸ್ಥಾಪಕ ನಿರ್ದೇಶಕ

‘ಸಹಕಾರಿ ತತ್ವಗಳ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಬ್ಯಾಂಕ್ ಗ್ರಾಮೀಣ ಅಭಿವೃದ್ಧಿಗೆ 100 ವರ್ಷಗಳ ಸೇವೆಯನ್ನು ಪೂರೈಸಿದೆ. ಅದೇ ಸಮಯದಲ್ಲಿ ತಂತ್ರಜ್ಞಾನ, ಕಾರ್ಯ ಸಂಸ್ಕೃತಿ ಮತ್ತು ಉತ್ತಮ ಆಡಳಿತದ ಹೊಸ ವಿಧಾನಗಳನ್ನು ಒಟ್ಟುಗೂಡಿಸಲು ಮತ್ತು ಕಾರ್ಯಗತಗೊಳಿಸಲು ಶ್ರಮಿಸುತ್ತಿದೆ’ ಎನ್ನುತ್ತಾರೆ ವಿಶ್ವನಾಥ

ಬ್ಯಾಂಕಿನ ಕಾರ್ಯಾಚರಣೆಯ ಕ್ಷೇತ್ರವು ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಹರಡಿಕೊಂಡಿದೆ, ಇದರಲ್ಲಿ 28 ಶಾಖೆಗಳು, 249 ಪಿಎಸಿಎಸ್ಗಳು ಸೇರಿವೆ, ಅವುಗಳಲ್ಲಿ 217 ಸಾಲ ಪಡೆಯುವ ಒಎಸಿಎಸ್ ನಗರ ಬ್ಯಾಂಕುಗಳು ಮತ್ತು ಇತರ ಸಾಲ ಸಹಕಾರಿ ಸಂಘಗಳು ಸೇರಿವೆ ಎಂದು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.