ಭಾನುವಾರ, ಮೇ 22, 2022
23 °C
ಮೇ 8 ರಂದು ಬಹುತ್ವ ಭಾರತೀಯರ ಸಮಾವೇಶ

8ಕ್ಕೆ ಬಹುತ್ವ ಭಾರತೀಯರ ಸಮಾವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂಧನೂರು: ದಲಿತ ಹಿಂದುಳಿದ ಅಲ್ಪಸಂಖ್ಯಾತ ಹಾಗೂ ಪ್ರಗತಿಪರ ಒಕ್ಕೂಟದಿಂದ ಮೇ 8 ರಂದು ನಡೆಯಲಿರುವ ಬಹುತ್ವ ಭಾರತೀಯರ ಭಾವೈಕ್ಯತಾ ಸಮಾವೇಶ ಹಿನ್ನೆಲೆಯಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕರಪತ್ರ ಹಾಗೂ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಿ ಪ್ರಚಾರಾಂದೋಲನಕ್ಕೆ ಚಾಲನೆ ನೀಡಲಾಯಿತು.

ಒಕ್ಕೂಟದ ಸಂಚಾಲಕರ ಡಿ.ಎಚ್.ಕಂಬಳಿ ಮಾತನಾಡಿ ‘ಕೋಮುವಾದಿ ಶಕ್ತಿಗಳು ಅಧಿಕಾರವನ್ನು ದುರು ಪಯೋಗ ಮಾಡಿಕೊಂಡು ಪ್ರಜಾ ಪ್ರಭುತ್ವ ಜಾಗದಲ್ಲಿ ಬ್ರಾಹ್ಮಣವಾದಿ ಪ್ಯಾಸಿಸ್ಟ್ ಆಡಳಿತಕ್ಕೆ ಮುಂದಾಗಿ ಯುವ ಸಮೂಹದಲ್ಲಿ ಮತೀಯವಾದದ ವಿಷ ಬೀಜವನ್ನು ಬಿತ್ತಿ ರಾಜ್ಯ ಹಾಗೂ ರಾಷ್ಟ್ರದಲ್ಲಿ ಕೋಮು ಸಾಮರಸ್ಯ ಹದಗೆಡಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋಮು ಸೌಹಾರ್ದತೆ, ಸ್ವಾತಂತ್ರ್ಯ ಮತ್ತು ಸಮಾನತೆ-ಸಹಬಾಳ್ವೆ ಪ್ರೀತಿಸುವ ಎಲ್ಲರನ್ನು ಒಗ್ಗೂಡಿಸಲು ಬಹುತ್ವ ಭಾರತ ಕಟ್ಟುವ ಮನಸುಳ್ಳ ಎಲ್ಲಾ ಸಂಘಟನೆಗಳು ಬೇಧ ಬಿಟ್ಟು ಸ್ವಯಂಪ್ರೇರಿತವಾಗಿ ಸಮಾವೇಶದಲ್ಲಿ ನದಿಗಳಂತೆ ಹರಿದು ಬಂದು ಸಮುದ್ರದಂತೆ ಸೇರಿ ಇಡೀ ರಾಷ್ಟ್ರಕ್ಕೆ ಭಾವೈಕ್ಯತೆಯ ಸಂದೇಶ ಸಾರಲಾಗುವುದು. ಆದ್ದರಿಂದ ಪ್ರತಿಯೊಬ್ಬರು ಸಮಾವೇಶದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕೋರಿದರು. ಕೆ. ಜಿಲಾನಿಪಾಷಾ, ಖಾದರಸುಭಾನಿ, ಡಿ.ಎಚ್.ಪೂಜಾರ, ಎಂ.ಡಿ.ನದೀಮುಲ್ಲಾ, ಹನುಮಂತ ಗೋಮರ್ಸಿ, ನಿರುಪಾದೆಪ್ಪ ಗುಡಿಹಾಳ, ಎಂ.ಗಂಗಾಧರ, ದುರುಗಪ್ಪ ರೌಡಕುಂದ, ಗುಡದೇಶ ಭೇರ್ಗಿ, ಹೆಚ್.ಎನ್.ಬಡಿಗೇರ ಮಾತನಾಡಿದರು. ಹಸೇನಸಾಬ, ಪೂಜಪ್ಪ ಪೂಜಾರಿ, ಶಬ್ಬೀರ್, ಬಿ.ಲಿಂಗಪ್ಪ, ನರಸಪ್ಪ ಕಟ್ಟಿಮನಿ, ದೌಲಸಾಬ ದೊಡ್ಡಮನಿ, ಯಲ್ಲಪ್ಪ ಗೋಮರ್ಸಿ, ಎಂ.ಎಸ್.ರಾಜಶೇಖರ, ನಿರುಪಾದಿ ಸಾಸಲಮರಿ, ಶರಣು ಮಲ್ಲಾಪೂರ, ರಮೇಶ ಭೇರ್ಗಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು