ಭಾನುವಾರ, ಅಕ್ಟೋಬರ್ 25, 2020
26 °C

ಕೋವಿಡ್‌ನಿಂದ ಗುಣಮುಖರಾದ 157 ಮಂದಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಜಿಲ್ಲೆಯಲ್ಲಿ ಸೋಮವಾರ ಮತ್ತೆ 60 ಜನರಿಗೆ ಕೋವಿಡ್‌ ದೃಢವಾಗಿದೆ. ಇದೇ ವೇಳೆ, ಕೋವಿಡ್‌ನಿಂದ ಗುಣಮುಖರಾಗಿದ್ದ 157 ಜನರನ್ನು ಬಿಡುಗಡೆ ಮಾಡಲಾಗಿದೆ. ಸದ್ಯ 1,644 ಸಕ್ರಿಯ ಪ್ರಕರಣಗಳಿವೆ.

ಇದುವರೆಗೂ ಒಟ್ಟು 10,507 ಸೋಂಕಿತರು ಪತ್ತೆಯಾಗಿದ್ದಾರೆ. ಅದರಲ್ಲಿ ಗುಣಮುಖರಾದವರು ಒಟ್ಟು 8,731 ಜನರು. ಕೋವಿಡ್‌ನಿಂದ ಮತ್ತೆ ಇಬ್ಬರು ಮೃತಪಟ್ಟಿದ್ದು, ಮೃತರ ಸಂಖ್ಯೆ ಒಟ್ಟು 132 ಕ್ಕೆ ಏರಿಕೆ ಆಗಿದೆ.

ಗಂಭೀರ ಸ್ಥಿತಿಯಲ್ಲಿದ್ದ 7 ಜನರನ್ನು ಒಪೆಕ್‌ಗೆ ದಾಖಲಿಸಲಾಗಿದ್ದು, ಒಟ್ಟು 342 ಜನರು ಆಸ್ಪತ್ರೆಯಲ್ಲಿದ್ದಾರೆ. ಒಟ್ಟು 195 ಮಾದರಿಗಳ ವರದಿ ಬರಬೇಕಿದೆ. ಇದುವರೆಗೂ ಒಟ್ಟು 1,46,625 ಜನರಿಂದ ಗಂಟಲು ದ್ರವ ಸಂಗ್ರಹಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು