ಭಾನುವಾರ, ಸೆಪ್ಟೆಂಬರ್ 19, 2021
23 °C

ಬಾಗಲವಾಡ: ಕೋವಿಡ್‍ ಲಸಿಕಾ ಮೇಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕವಿತಾಳ: ‘ಕೊವಿಡ್‌ನಿಂದ ರಕ್ಷಿಸಿಕೊಳ್ಳಲು 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು’ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಹೇಳಿದರು.

ಸಿರವಾರ ತಾಲ್ಲೂಕಿನ ಬಾಗಲವಾಡ ಮತ್ತು ಹಿರೇಹಣಿಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ಸಾರ್ವಜನಿಕರಿಗೆ ಬುಧವಾರ ಕೋವಿಡ್‍ ಲಸಿಕೆ ಕುರಿತು ಮಾಹಿತಿ ನೀಡಿದ ಅವರು, ‘ಪ್ರತಿ ಬುಧವಾರ ಲಸಿಕಾ ಮೇಳವನ್ನು ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ. ಹೀಗಾಗಿ ಕಡ್ಡಾಯವಾಗಿ ಲಸಿಕೆ ಪಡೆಯಬೇಕು’ ಎಂದರು.

‘ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಗ್ರಾಮಸ್ಥರ ಮನವೊಲಿಸಿ ಲಸಿಕಾ ಮೇಳವನ್ನು ಯಶಸ್ವಿಗೊಳಿಸುವಂತೆ’ ಡಾ.ಶರಣಬಸವ ಪಾಟೀಲ್‍ ಹೇಳಿದರು.

ಆರೋಗ್ಯ ಸುರಕ್ಷಾ ಅಧಿಕಾರಿಗಳಾದ ಶಿವಲಿಂಗಮ್ಮ, ಯಂಕಮ್ಮ, ಸಮುದಾಯ ಆರೋಗ್ಯ ಅಧಿಕಾರಿಗಳಾದ ಮಹೇಶ, ಶರಣಯ್ಯ ಹಿರೇಮಠ, ಚೈತ್ರಾ, ನಾಗರತ್ನ ಹೇಮಾವತಿ, ಅಂಬುತಾಯಿ ಇದ್ದರು.

ಸರ್ಕಾರಿ ಸೌಲಭ್ಯ ಸ್ಥಗಿತ: ಎಚ್ಚರಿಕೆ

ಹಟ್ಟಿಚಿನ್ನದ ಗಣಿ: 18 ವರ್ಷ ಮೇಲ್ಪಟ್ಟ ಎಲ್ಲರೂ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಬೇಕು. ನಿರ್ಲಕ್ಷಿಸಿದರೆ, ಸರ್ಕಾರದ ಸೌಲಭ್ಯಗಳಾದ ವಿದ್ಯುತ್‌, ಪಡಿತರ ಇವುಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ತಾಲ್ಲೂಕ ಆರೋಗ್ಯ ಶಿಕ್ಷಣಧಿಕಾರಿ ಪ್ರಾಣೇಶ ಕುಲಕರ್ಣಿ ಹೇಳಿದರು.

ಪಟ್ಟಣದ ಹಳೆ ಪಂಚಾಯಿತಿ ಹತ್ತಿರ ಆರೋಗ್ಯ ಇಲಾಖೆ ಹಾಗೂ ಹಟ್ಟಿ ಪಟ್ಟಣ ಪಂಚಾಯಿತಿ, ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಲಸಿಕಾ ಮೇಳದಲ್ಲಿ ಅವರು ಮಾತನಾಡಿದರು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ನಾಗರತ್ನ ಶರಣುಗೌಡ ಗುರಿಕಾರ ಮಾತನಾಡಿ, ಪಟ್ಟಣದಲ್ಲಿ 39 ಸಾವಿರ ಜನಸಂಖ್ಯೆ ಇದ್ದು 19 ಸಾವಿರ ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ. ಮನೆ ಮನೆಗೆ ಆಶಾ ಕಾರ್ಯಕರ್ತರು, ಆರೋಗ್ಯ ಇಲಾಖೆ ಸಿಬ್ಬಂದಿ ಸಂಚಾರ ಮಾಡಿ ಲಸಿಕೆ ಹಾಕುತ್ತಿದ್ದಾರೆ. ಎಲ್ಲರ ಸಹಕಾರಿಸಬೇಕು ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಮ್ಮ ನಾಗರೆಡ್ಡಿ ಮಾತನಾಡಿದರು.

ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿ ಅಭಿಷೇಕ್, ವೈದ್ಯರಾದ ಲಕ್ಚ್ಮಿಕಾಂತ, ಗುರಮ್ಮ, ಅಕ್ರಮ್ ರಾಜಪ್ಪ, ರಹಿಮಾನ್, ಅಜೀಮ್ ಪಾಶ, ಆನ್ವರಿ, ಚಂದ್ರಕಲಾ, ಶಾಂತ, ಲಕ್ಷ್ಮಿ, ಜ್ಯೋತಿ, ಅಂಬ್ಬಮ್ಮ, ರಾಜುಗೌಡ ಗುರಿಕಾರ, ಇಸ್ಮಾಯಿಲ್, ಸೇರಿದಂತೆ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು