ರಾಯಚೂರು: ವೆನೆಜುವೆಲಾದ ಮೇಲೆ ಅಮೆರಿಕದ ಆಕ್ರಮಣ ವಿಷಯದಲ್ಲಿ ಕೇಂದ್ರದ ಬಿಜೆಪಿ ಸರ್ಕಾರದ ಅಂಜುಬುರುಕ,ಮತ್ತು ಅಪಮಾನಕರ ನಿಲುವು ಖಂಡಿಸಿ ಸಿಪಿಐ(ಎಂ) ಲಿಬರೇಶನ್ ಕಾರ್ಯಕರ್ತರು ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ಅಮೆರಿಕ ಅಧ್ಯಕ್ಷ ಟ್ರಂಪ್ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.

ವೆನೆಜುವೆಲಾದ ವಿರುದ್ಧದ ದುರಾಕ್ರಮಣ ಮತ್ತು ಅಮೆರಿಕದ ಸಶಸ್ತ್ರ ಪಡೆಗಳು ಅದರ ಅಧ್ಯಕ್ಷರು ಮತ್ತು ಅವರ ಪತ್ನಿಯನ್ನು ಅಪಹರಿಸಿದ್ದಕ್ಕೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಅಂಜುಬುರುಕತನದ ಪ್ರತಿಕ್ರಿಯೆ ನೀಡಿದೆ. ಭಾರತವು ಇತರ ರಾಷ್ಟ್ರಗಳ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವದ ರಕ್ಷಣೆಯ ಬಗ್ಗೆ ದೀರ್ಘಕಾಲದಿಂದ ತಳೆದುಕೊಂಡು ಬಂದಿರುವ ನಿಲುವಿಗೆ ತಕ್ಕುದಾಗಿಲ್ಲ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿವೆ

ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿರುವ ಹೇಳಿಕೆಯು ವೆನೆಜುವೆಲಾದ ಬೆಳವಣಿಗೆಗಳ ಬಗ್ಗೆ ಆಳವಾದ ಕಳವಳವನ್ನು ಮಾತ್ರ ವ್ಯಕ್ತಪಡಿಸಿದೆ ಎಂದು ಟೀಕಿಸಿದರು.

ವಿಶ್ವಸಂಸ್ಥೆಯ ಚಾರ್ಟರ್ ಮತ್ತು ಅಂತರರಾಷ್ಟ್ರೀಯ ಕಾನೂನಿನ ಸಂಪೂರ್ಣ ಉಲ್ಲಂಘನೆಯ ಬಗ್ಗೆ ಒಂದೇ ಒಂದು ಖಂಡನೆಯ ಪದವೂ ಇಲ್ಲ ಸಂಯುಕ್ತ ಸಂಸ್ಥಾನದ ಕೆಲವು ಯುರೋಪಿಯನ್ ಮಿತ್ರರಾಷ್ಟ್ರಗಳೂ ಸಹ ಇಂತಹ ಮಾತುಗಳನ್ನು ಹೇಳಿವೆ ಎಂಬ ಸಂಗತಿಯತ್ತ ಅದು ಗಮನ ಸೆಳೆದಿದೆ ಎಂದು ಹೇಳಿದರು.

ಭಾರತದ ನಿಲುವು ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಂತಹ ಬ್ರಿಕ್ಸ್ ಪಾಲುದಾರರು ತೆಗೆದುಕೊಂಡ ನಿಲುವಿಗೆ ತದ್ವಿರುದ್ಧವಾಗಿದೆ, ಅವರು ಅಮೆರಿಕದ ಆಕ್ರಮಣವನ್ನು ನಿಸ್ಸಂದಿಗ್ಧವಾಗಿ ಮತ್ತು ಬಲವಾಗಿ ಖಂಡಿಸಿದ್ದಾರೆ ಮತ್ತು ಅಧ್ಯಕ್ಷ ಮಡುರೊ ಮತ್ತು ಅವರ ಪತ್ನಿಯನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಅಮೆರಿಕದ ಪರ ನಿಲುವು ಮೋದಿ ಸರ್ಕಾರದ ಬಲಪಂಥೀಯ ಸಿದ್ಧಾಂತ ಮತ್ತು ಟ್ರಂಪ್ ಆಡಳಿತದೊಂದಿಗೆ ಅದು ಹೊಂದಿರುವ ರಣತಂತ್ರದ ಸಂಬಂಧಗಳಿಗೆ ಅನುಗುಣವಾಗಿದೆ ಎಂದು ಹೇಳಿದರು.

ಈ ನಿಲುವಿನಿಂದಾಗಿ ಭಾರತವು ಜಾಗತಿಕ ದಕ್ಷಿಣದ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ಯಾವುದೇ ದಾವೆಯನ್ನು ಕೈಬಿಟ್ಟಂತಾಗಲಿದೆ. ಮೋದಿ ಸರ್ಕಾರ ಈ ಅಪಮಾನಕರ ನಿಲುವನ್ನು ಕೈಬಿಡಬೇಕು ಮತ್ತು ವೆನೆಜುವೆಲಾದಲ್ಲಿ ಅಮೆರಿಕದ ಆಕ್ರಮಣ ಹಾಗೂ ಕಾನೂನುಬಾಹಿರ ಕೃತ್ಯಗಳ ವಿರುದ್ಧ ಸ್ಪಷ್ಟವಾಗಿ ಮಾತನಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ಜಿ.ವೀರೇಶ. ಸಿಪಿಐ(ಎಂಎಲ್) ಲಿಬರೇಶನ್ ನ ಜಿಲ್ಲಾ ಮುಖಂಡ ಅಜೀಜ್ ಜಾಗೀರದಾರ್, ಡಿ.ಎಸ್.ಶರಣಬಸವ. ರಸೂಲ್ ಸವಾರಪ್ಪ.ಎಂ.ಡಿ.ಹನೀಫ್.ನಿಸಾರ್. ಜಿಲಾನಿ ಯರಗೇಗಾ. ಭೀಮಯ್ಯ.ಮಾರಯ್ಯ. ಚೀನಿ.ಜಿಲಾನಿ ಪಾಷಾ, ಸುಜಾತಾ, ಮಹಾದೇವಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.