ದೇವದುರ್ಗ: ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಪಟ್ಟಣದ ಡಾನ್ ಬಾಸ್ಕೋ ವಿಜ್ಞಾನ ಕಾಲೇಜಿನಲ್ಲಿ ಸೋಮವಾರ ನಡೆಯಿತು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಸಹಭಾಗಿತ್ವದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಶಾಸಕಿ ಕರೆಮ್ಮ ಜಿ ನಾಯಕ ಉದ್ಘಾಟಿಸಿದರು.

‘ಪ್ರಶಸ್ತಿ ಬರಲಿ, ಬರದೆ ಇರಲಿ. ಸ್ಪರ್ಧೆಗಳಲ್ಲಿ ಭಾಗವಹಿಸಿ, ಆರೋಗ್ಯಕರ ಮನಸ್ಸನ್ನು ಬೆಳೆಸಿಕೊಳ್ಳಬೇಕು. ಅಂಕ ಗಳಿಕೆಯೊಂದಿದ್ದರೆ ಜೀವನ ಪರಿಪೂರ್ಣ ಅಲ್ಲ. ಉತ್ತಮ ವ್ಯಕ್ತಿತ್ವವೂ ಬೇಕು. ಅಂಕದ ಜತೆಗೆ ವಿನಯವು ಬೇಕು. ಅದಕ್ಕಾಗಿ ಕಣ್ಣು, ಕಿವಿ ತೆರೆದಿಡಬೇಕು. ಪ್ರತಿಯೊಬ್ಬರಿಂದಲೂ ಕಲಿಯುತ್ತಿರಬೇಕು’ ಎಂದು ಹೇಳಿದರು.

ಜಿಲ್ಲಾ ಉಪ ನಿರ್ದೇಶಕ ಚಂದ್ರಶೇಖರ ಭಂಡಾರಿ (ಅಭಿವೃದ್ಧಿ ವಿಭಾಗ) ಮಾತನಾಡಿ, ‘ಸ್ಪರ್ಧೆಗಳಲ್ಲಿ ಭಾಗವಹಿಸಿ, ಆರೋಗ್ಯಕರ ಮನಸ್ಸನ್ನು ಬೆಳೆಸಿಕೊಳ್ಳಬೇಕು’ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ ಮಾತನಾಡಿ, ‘ಬದುಕಿನಲ್ಲಿ ಮೇಲ್ಮುಖವಾಗಿ ನಡೆಯಲು ಇಚ್ಛಾಶಕ್ತಿ ಮತ್ತು ಕ್ರಿಯಾಶಕ್ತಿಯ ಸಮನ್ವಯತೆ ಮುಖ್ಯವಾಗುತ್ತದೆ. ಅವಕಾಶ ಹೇರಳವಾಗಿರುವ ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿ ಜೀವನದಲ್ಲಿ ಶ್ರಮ ಪಟ್ಟು ಸಾಧನೆ ಮಾಡಬೇಕು’ ಎಂದು ಸಲಹೆ ನೀಡಿದರು.

ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಬಣ್ಣ ಬಣ್ಣದ ವೇಷಭೂಷಣಗಳನ್ನು ಧರಿಸಿದ್ದರು. ಕೋಲಾಟ, ಜಾನಪದ, ರಂಗಗೀತೆ, ಗೀಗಿಪದ, ಭಾವಗೀತೆ, ಛದ್ಮವೇಷ, ಕಥೆ ಹೇಳುವುದು, ಜಾನಪದ ನೃತ್ಯ, ಮಿಮಿಕ್ರಿ, ರಂಗೋಲಿ, ರಸಪ್ರಶ್ನೆ, ರಂಗಪ್ರದರ್ಶನ, ಪದ್ಯ ಹೇಳುವುದು, ಖವ್ವಾಲಿ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳನ್ನು ತಮ್ಮನ್ನು ತೊಡಗಿಸಿಕೊಂಡರು. ಜೇಡಿಮಣ್ಣಿನಲ್ಲಿ ಮೊಸಳೆ, ಆಮೆ, ಪರಿಸರದ ಬಗೆ ಸೇರಿದಂತೆ ವಿವಿಧ ಕಲಾಕೃತಿಗಳನ್ನು ರಚನೆ ಮಾಡಿದರು. ತಾಲ್ಲೂಕಿನ ಸರ್ಕಾರಿ ಶಾಲೆಗಳ ಶಿಕ್ಷಕರು ತಮ್ಮ ಶಾಲೆಗಳ ಮಕ್ಕಳನ್ನು ಸಿದ್ಧಗೊಳಿಸಿದರು.

ಮಕ್ಕಳು ಹಾಡು ಹೇಳಿಕೊಂಡು ನೃತ್ಯ ಮಾಡಿದರು. ಉರ್ದು ಶಾಲೆ ಮಕ್ಳು ಪ್ರದರ್ಶಿಸಿದ ಕವ್ವಾಲಿ, ಜಾನಪದ, ಗೀತೆಗಳ ನೃತ್ಯಗಳು ಜನಮನ ಸೆಳೆಯಿತು. ಪರಿಸರ, ಮರದಿಂದ ಆಗುವ ಪ್ರಯೋಜಗಳು, ಸಂಚಾರ ನಿಯಮಗಳು, ಆಮೆ, ಕಾಡುಮನುಷ್ಯ, ರಥದಲ್ಲಿ ಕೃಷ್ಣನ ವೇಷ ಸೇರಿದಂತೆ ಮಕ್ಕಳ ವಿವಿಧ ವೇಷಭೂಷಣಗಳು ನೋಡುಗರನ್ನು ಆಕರ್ಷಿಸಿದವು.

ಕ್ಷೇತ್ರ ಸಮನ್ವಯ ಅಧಿಕಾರಿ ಶಿವರಾಜ ಪೂಜಾರಿ, ಡಾನ್ ಬಾಸ್ಕೋ ಶಾಲೆಯ ಫಾದರ್ ಟೋಮಿ, ಅರಕೇರಾ ತಾ.ಪಂ. ಇಒ ಅಣ್ಣಾರಾವ್, ಪುರಸಭೆ ಮುಖ್ಯಧಿಕಾರಿ ಹಂಪಯ್ಯ ಕೆ., ಸರ್ಕಾರಿ ನೌಕರರ ಸಂಘ ತಾಲ್ಲೂಕು ಘಟಕ ಅಧ್ಯಕ್ಷ ಹನುಮಂತ್ರಾಯ ಶಾಖೆ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ವಿರುಪನಗೌಡ ನಾಗಡದಿನ್ನಿ,ಪತ್ರಕರ್ತರ ಸಂಘದ ಅಧ್ಯಕ್ಷ ನರಸಿಂಗರಾವ್ ಸರಕೀಲ್ ನೇಮಣ್ಣ, ರಂಗನಾಥ ಸಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಸವರಾಜ ಕಟ್ಟೀಮನಿ, ವಿಶ್ವನಾಥ, ಹೊನ್ನಪ್ಪ, ಮುಖಂಡರಾದ ಸಿದ್ದಣ್ಣ ಬಿ.ಗಣೇಕಲ್, ಶರಣಗೌಡ ಸುಂಕೇಶ್ವರಹಾಳ, ಮಂಜುನಾಥ ಮಾಪಳ್ಳಿ ದೈಹಿಕ ಶಿಕ್ಷಣ ಶಿಕ್ಷಕರು, ಸಹ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.