ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಕೋವಿಡ್‌ನಿಂದ ಉಪನೋಂದಣಾಧಿಕಾರಿ ಸಾವು; ಸುದ್ದಿ ತಿಳಿದು ತಾಯಿಯೂ ಸಾವು

Last Updated 1 ಆಗಸ್ಟ್ 2020, 10:45 IST
ಅಕ್ಷರ ಗಾತ್ರ
ADVERTISEMENT
""

ರಾಯಚೂರು: ಕೋವಿಡ್‌ ದೃಢವಾಗಿದ್ದರಿಂಧ ಹೈದರಾಬಾದ್‌ನಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಜಿಲ್ಲೆಯ ಮಾನ್ವಿ ತಾಲ್ಲೂಕು ಉಪನೋಂದಣಾಧಿಕಾರಿ ಶಕೀಲ್‌ ಅಹ್ಮದ್‌ (45) ಮೃತಪಟ್ಟಿದ್ದು, ಪುತ್ರನ ಮರಣದ ಸುದ್ದಿ ತಿಳಿಯುತ್ತಿದ್ದಂತೆ ರಾಯಚೂರಿನ ಹಾಜಿ ಕಾಲೋನಿಯಲ್ಲಿದ್ದ ತಾಯಿ ರಜೀಯಾ ಸುಲ್ತಾನ (65) ಕೂಡಾ ಮೃತಪಟ್ಟ ಮನಕಲಕುವ ಘಟನೆ ಶನಿವಾರ ನಡೆದಿದೆ.

ಶಕೀಲ್‌ ಅಹ್ಮದ್

ಇನ್ನೊಬ್ಬ ಸಹೋದರ ಬೆಂಗಳೂರಿನಲ್ಲಿ ಉಪನೋಂದಣಾಧಿಕಾರಿಯಾಗಿದ್ದು, ಕೋವಿಡ್‌ ದೃಢಪಟ್ಟಿದ್ದರಿಂದ ಚಿಕಿತ್ಸೆಗಾಗಿ ಹೈದರಾಬಾದ್‌ನಲ್ಲಿಯೇ ದಾಖಲಾಗಿದ್ದಾರೆ.

ಸಿರವಾರ ತಾಲ್ಲೂಕು ಕಲ್ಲೂರು ಗ್ರಾಮದ ಈ ಕುಟುಂಬವು ರಾಯಚೂರಿನಲ್ಲಿ ವಾಸಿಸುತ್ತಿತ್ತು. ಜುಲೈ 24 ರಂದು ಶಕೀಲ್‌ ಅವರಿಗೆ ಕೋವಿಡ್‌ ದೃಢವಾಗಿತ್ತು. ಆರಂಭದಲ್ಲಿ ಒಪೆಕ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆನಂತರ ಉಸಿರಾಟ ಸಮಸ್ಯೆ ತೀವ್ರವಾಗಿದ್ದರಿಂದ ಹೈದರಾಬಾದ್ ಖಾಸಗಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT