ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇವದುರ್ಗ | ಲಂಚ ಪಡೆಯುವ ವೇಳೆ ಪಿಎಸ್ಐ ಲೋಕಾಯುಕ್ತ ಬಲೆಗೆ

Published 25 ಮೇ 2024, 0:30 IST
Last Updated 25 ಮೇ 2024, 0:30 IST
ಅಕ್ಷರ ಗಾತ್ರ

ದೇವದುರ್ಗ: ತಾಲ್ಲೂಕಿನ ಗಬ್ಬೂರು ಪೊಲೀಸ್‌ ಠಾಣೆಯ ಪಿಎಸ್ಐ ಮಂಜುನಾಥ ಟಿ.ಡಿ ಹಾಗೂ ಪೊಲೀಸ್ ಕಾನ್‌ಸ್ಟೆಬಲ್‌ ರಮೇಶ ₹50 ಸಾವಿರ ಲಂಚ ಪಡೆಯುವ ವೇಳೆ ಶುಕ್ರವಾರ ರಾಯಚೂರು ಲೋಕಾಯುಕ್ತ ಪೊಲೀಸ್‍ ವರಿಷ್ಠಾಧಿಕಾರಿ ಎಂ.ಎನ್‍. ಶಶಿಧರ್ ನೇತೃತ್ವದ ತಂಡದ ಬಲೆಗೆ ಬಿದ್ದಿದ್ದಾರೆ.

ಗಬ್ಬೂರು ಗ್ರಾಮದ ಫಾರೂಕ್ ಎಂಬ ಯುವಕನಿಂದ ₹50 ಸಾವಿರ ಪಡೆಯುತ್ತಿದ್ದಾಗ ಲೋಕಾಯುಕ್ತ ತಂಡ ದಾಳಿ ನಡೆಸಿ ಬಂಧಿಸಿದೆ. ಮೇ 10ರಂದು ಗಬ್ಬೂರು ಗ್ರಾಮದ ಖಾಸಗಿ ಬ್ಯಾಂಕ್ ಉದ್ಯೋಗಿ ಫಾರೂಕ್‌ನನ್ನು ಕ್ರಿಕೆಟ್ ಬೆಟ್ಟಿಂಗ್ ಆರೋಪದ ಮೇಲೆ ವಶಕ್ಕೆ ಪಡೆದಿದ್ದರು. ಆದರೆ, ಪ್ರಕರಣ ದಾಖಲಿಸದೆ ಇರಲು
₹3 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಫಾರೂಕ್ ತಿಳಿಸಿದ್ದ.

ಫಾರೂಕ್ ವಿರುದ್ಧ ಕ್ರಿಕೆಟ್ ಬೆಟ್ಟಿಂಗ್ ಕೇಸ್ ದಾಖಲಿಸಿಕೊಳ್ಳದೆ ಇರಲು ಪಿಎಸ್ಐ ಮಂಜುನಾಥ ಕಾನ್‌ಸ್ಟೆಬಲ್‌ ರಮೇಶ ಮೂಲಕ ಪ್ರಾರಂಭದಲ್ಲಿ ₹10 ಲಕ್ಷಕ್ಕೆ ಬೇಡಿಕೆ ಇಟ್ಟು, ನಂತರ ₹3 ಲಕ್ಷಕ್ಕೆ ವ್ಯವಹಾರ ಕುದುರಿಸಿದ್ದರು. ಬಳಿಕ ಫಾರೂಕ್ ಲೋಕಾಯುಕ್ತರಿಗೆ ದೂರು ನೀಡಿದ್ದರು. ₹50 ಸಾವಿರ ಹಣ ನೀಡುವಾಗ ಕಾನ್‌ಸ್ಟೆಬಲ್‌ ರಮೇಶ ಸಿಕ್ಕಿಬಿದ್ದಿದ್ದಾನೆ. ಲೋಕಾಯುಕ್ತ ತಂಡದಲ್ಲಿ ಡಿವೈಎಸ್ಪಿ ರಘು ಜಿ, ಇನ್‍ಸ್ಪೆಕ್ಟರ್‌ಗಳಾದ ಅಮರೇಶ ಹುಬ್ಬಳ್ಳಿ, ಕಾಳಪ್ಪ ಬಡಿಗೇರ ಹಾಗೂ ಸಿಬ್ಬಂದಿ ಇದ್ದರು.

ರಮೇಶ

ರಮೇಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT