ಸೋಮವಾರ, ಜುಲೈ 26, 2021
26 °C

ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

'ಕಾಲೇಜಿನಲ್ಲಿ ಓದುವುದಕ್ಕೆ ನೀಡಿದ ಪ್ರೋತ್ಸಾಹದ ಕಾರಣದಿಂದ ಹೆಚ್ಚು ಅಂಕಗಳನ್ನು ಪಡೆಯುವುದಕ್ಕೆ ಸಾಧ್ಯವಾಗಿದೆ' ಎನ್ನುವುದು ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಮೊದಲ ಸ್ಥಾನ ಪಡೆದ ಸಾಕ್ಷಿ ರಾಠಿ ಅವರ ಮಾತು. ತಮ್ಮ ಸಾಧನೆಗೆ ಕಾರಣವಾದ ಅಂಶಗಳನ್ನು ಅವರು ವಿವರಿಸುವುದು ಹೀಗೆ.

---

ಕಾಲೇಜಿನಲ್ಲಿ ಓದುವುದಕ್ಕೆ ನೀಡಿದ ಪ್ರೋತ್ಸಾಹದ ಕಾರಣದಿಂದ ಹೆಚ್ಚು ಅಂಕಗಳನ್ನು ಪಡೆಯುವುದಕ್ಕೆ ಸಾಧ್ಯವಾಗಿದೆ. ಪ್ರತಿವಾರ ಕಿರುಪರೀಕ್ಷೆಗಳನ್ನು ಬರೆಸುತ್ತಿದ್ದರು. ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ  ಅನುಗುಣವಾಗಿ ಓದುವುದಕ್ಕೆ ಮಾರ್ಗದರ್ಶನ ಮಾಡುತ್ತಿದ್ದರು. ನನ್ನ ಸಾಧನೆಯಲ್ಲಿ ಶೇ 80 ರಷ್ಟು ಕಾಲೇಜಿನ ಪಾಲಿದೆ.

ಅಂದಿನ ಪಾಠವನ್ನು ಅಂದೇ ಓದಿ ಮುಗಿಸುತ್ತಿದ್ದೆ. ಯಾವುದರಲ್ಲಿ ಕಡಿಮೆ ಗೊತ್ತಿದೆಯೋ ಅದನ್ನು ಹೆಚ್ಚು ಓದಿಕೊಳ್ಳುತ್ತಿದ್ದೆ. ಲಾಕ್‍ಡೌನ್ ಅವಧಿಯಲ್ಲಿ ಹೆಚ್ಚು ಓದಲು ಅವಕಾಶವಾಯಿತು. ಇಂಗ್ಲಿಷ್ ವಿಷಯದಲ್ಲಿ ಪಠ್ಯದಲ್ಲಿ ಇರುವುದನ್ನೆ ಪ್ರಶ್ನೆ ಕೇಳುವುದಿಲ್ಲ. ಸ್ವಂತ ಬುದ್ಧಿವಂತಿಕೆ ಇರಬೇಕಾಗುತ್ತದೆ. ಪರೀಕ್ಷೆಗಳು ಮೂರು ತಿಂಗಳು ಪೂರ್ವ ಇಂಗ್ಲಿಷ್ ವಿಷಯ ತುಂಗಾ ಗಹನವಾಗಿ ಓದಿಕೊಂಡಿದ್ದೇನೆ.
ನಿರಂತರವಾಗಿ ಓದುವ ಹವ್ಯಾಸ ಇಟ್ಟುಕೊಳ್ಳವೇಕು. ಪರೀಕ್ಷೆ ಸಮೀಪಿಸುತ್ತಿದ್ದಂತೆ ಓದು ಆರಂಭಿಸಿದರೆ ಗರಿಷ್ಠ ಅಂಕಗಳನ್ನು ಪಡೆಯುವುದು ಕಷ್ಟ ಎನ್ನುವುದು ನನ್ನ ಸಲಹೆ.

ನಾನು ಕೂಡಾ ಮೊಬೈಲ್ ಬಳಕೆ ಮಾಡುತ್ತಿದ್ದೆ. ಟಿವಿ ನೋಡುವುದರಿಂದ ಕೆಲವು ಸಲ ಗಮನ ಬೇರೆ ಕಡೆಗೆ ಹೋಗುತ್ತಿತ್ತು. ಆದರೆ, ಪಠ್ಯಕ್ಕೆ ಪೂರಕವಾಗಿ ಮೊಬೈಲ್ ಬಳಸುವುದು ಮುಖ್ಯ. ಹಳೇ ಪ್ರಶ್ನೆಪತ್ರಿಕೆಗಳು ಅದರಲ್ಲಿ ಹುಡುಕಲು ಸಾಧ್ಯವಾಯಿತು. ವಾಣಿಜ್ಯದಲ್ಲಿ ಸಾಕಷ್ಟು ಓದಿಕೊಂಡಿರುವವರ ಸಲಹೆಗಳನ್ನು ನೋಡುವುದಕ್ಕೆ ಮೊಬೈಲ್‍ನಿಂದ ಸಾಧ್ಯವಾಗಿದೆ.
ರಾಯಚೂರಿನಲ್ಲಿಯೆ ವೇದಾಂತ ಅಕಾಡೆಮಿಯಲ್ಲಿ ಬಿಕಾಂ ಮಾಡಿಕೊಂಡು, ಮುಂದೆ ಸಿಎ ಮಾಡುವ ಗುರಿ ಹೊಂದಿದ್ದೇನೆ. ಇದಕ್ಕಾಗಿ ಈಗಿನಿಂದಲೇ ತಯಾರಿ ಮಾಡಿಕೊಳ್ಳುತ್ತಿದ್ದೇನೆ.

ಹೆಸರು: ಸಾಕ್ಷಿ ರಾಠಿ, ತಂದೆ: ಅನಿಲ ರಾಠಿ, ತಾಯಿ: ಉಮಾ ರಾಠಿ, ಊರು: ರಾಯಚೂರು, ಕಾಲೇಜು: ಶ್ರೀ ವೆಂಕಟೇಶ್ವರ ಪಿಯು ಕಾಲೇಜು, ರಾಯಚೂರು, ಪಡೆದ ಅಂಕಗಳು: 600/588 (ಶೇ 98) ವಾಣಿಜ್ಯ‌ವಿಭಾಗ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು