ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತ ಮಂಡಳಿ ವೈಫಲ್ಯದಿಂದ ನೀರಿನ ಸಮಸ್ಯೆ

ಕಸ ವಿಲೇವಾರಿ ವಾಹನಗಳಿಗೆ ಚಾಲನೆ: ಶಾಸಕ ಹೇಳಿಕೆ
Last Updated 27 ಜುಲೈ 2022, 4:06 IST
ಅಕ್ಷರ ಗಾತ್ರ

ಲಿಂಗಸುಗೂರು: ‘ಪುರಸಭೆ ಅಧಿಕಾರಿಗಳ ತಪ್ಪು ಮಾಹಿತಿ ಮತ್ತು ಆಡಳಿತ ಮಂಡಳಿಯ ವೈಫಲ್ಯದಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಇದಕ್ಕೆ ನಾಗರಿಕರಲ್ಲಿ ಕ್ಷಮೆಯಾಚಿಸುವೆ’ ಎಂದು ಶಾಸಕ ಡಿ.ಎಸ್‍ ಹೂಲಗೇರಿ ಹೇಳಿದರು.

ಕಸ ವಿಲೇವಾರಿ ವಾಹನಗಳಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿ,‘ಈ ಮುಂಚಿನ ವಾಹನಗಳು ದುರಸ್ತಿಗೆ ಬಂದಿದ್ದವು. ಸ್ವಚ್ಛ ಭಾರತ ಅಭಿಯಾನ ಮತ್ತು 18ನೇ ಹಣಕಾಸು ಯೋಜನೆಯಡಿ ಒಟ್ಟು ಐದು ಆಟೊಗಳನ್ನು ಖರೀದಿಸಲಾಗಿದೆ. ಆಟೊಗಳನ್ನು ಸಮರ್ಪಕವಾಗಿ ಬಳಕೆ ಮಾಡಬೇಕು. ಈ ಮೂಲಕ ಸ್ವಚ್ಛತೆ ಕಾಪಾಡಬೇಕು’ ಎಂದು ಸಲಹೆ ನೀಡಿದರು.‘ಕುಡಿಯುವ ನೀರು ಯೋಜನೆಯ ಕೆರೆ ಬತ್ತುತ್ತಿರುವ ಸಂಗತಿ ಅಚ್ಚರಿ ಮೂಡಿಸಿದೆ’ ಎಂದು ಹೇಳಿದರು.

ವಾಗ್ವಾದ: ಪುರಸಭೆ ಅಧ್ಯಕ್ಷೆ ಸುನಿತಾ ಕೆಂಭಾವಿ ಮತ್ತು ಉಪಾಧ್ಯಕ್ಷ ಎಂ.ಡಿ.ರಫಿ ನಡುವೆ ನಡೆದ ಮುಸುಕಿನ ಗುದ್ದಾಟ ಮಂಗಳವಾರ ಶಾಸಕ ಡಿ.ಎಸ್‍.ಹೂಲಗೇರಿ ಸಮಕ್ಷಮದಲ್ಲಿ ವಾಗ್ವಾದದ ಮೂಲಕ ಬಹಿರಂಗಗೊಂಡಿತು.ಸುನಿತಾ ಕೆಂಭಾವಿ ಹಾಗೂ ಎಂ.ಡಿ ರಫಿ ಅವರು ಆರೋಪ, ಪ್ರತ್ಯಾರೋಪ ಮಾಡಿಕೊಂಡರು.ವಿಧಾನ ಪರಿಷತ್‍ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ, ಮುಖ್ಯಾಧಿಕಾರಿ ಜಗನ್ನಾಥ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಮೋದ ಕುಲಕರ್ಣಿ, ಸದಸ್ಯರಾದ ಸೋಮನಗೌಡ, ದೊಡ್ಡನಗೌಡ ಹೊಸಮನಿ, ಶಿವರಾಯ, ರುದ್ರಪ್ಪ ಬ್ಯಾಗಿ, ಬಾಬುರೆಡ್ಡಿ , ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT