ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತಾಳ: ಬಿಜೆಪಿ ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ

Published 10 ಫೆಬ್ರುವರಿ 2024, 15:43 IST
Last Updated 10 ಫೆಬ್ರುವರಿ 2024, 15:43 IST
ಅಕ್ಷರ ಗಾತ್ರ

ಕವಿತಾಳ: ‘ಕಿಸಾನ್‌ ಸಮ್ಮಾನ್‌, ಆಯುಷ್ಮಾನ್‌ ಭಾರತ ಮತ್ತು ಸುಕನ್ಯಾ ಸಮೃದ್ದಿ ಸೇರಿದಂತೆ ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳ ಕುರಿತು ಪಕ್ಷದ ಕಾರ್ಯಕರ್ತರು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು’ ಎಂದು ಬಿಜೆಪಿ ಮುಖಂಡ ಚಂದ್ರಕಾಂತ ಪಾಟೀಲ ಗೂಗೆಬಾಳ ಹೇಳಿದರು.

ಸಮೀಪದ ವಟಗಲ್‌ ಗ್ರಾಮದಲ್ಲಿ ಶನಿವಾರ ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಯ ಪರವಾಗಿ ತಳಮಟ್ಟದಲ್ಲಿ ಶ್ರಮಿಸುವ ಪಕ್ಷದ ಕಾರ್ಯಕರ್ತರು ಪಕ್ಷಕ್ಕೆ ಜೀವಾಳವಿದ್ದಂತೆ’ ಎಂದು ಹೇಳಿದರು.

ಮುಖಂಡರಾದ ಜಗಧೀಶ್ಚಂದ್ರಸ್ವಾಮಿ ಹಾಲಾಪುರ, ಶಿವಕುಮಾರ ಪಾಟೀಲ, ಮಲ್ಲನಗೌಡ ಮಾಲೀಪಾಟೀಲ, ಆದನಗೌಡ ಪಾಟೀಲ, ಬಸನಗೌಡ ಸಿಂಧನೂರು, ಭರತ ಗೌಡ, ರೆಡೆಪ್ಪ ನಾಡಗೌಡ, ಲಿಂಗರಾಜ ಯಲೇರಿ, ಅಮರೇಶ ನಾಯಕ, ಮತ್ತು ರುದ್ರುಗೌಡ ವೀರನಗೌಡ್ರು, ಮಲ್ಲಿಕಾರ್ಜುನ ವೀರನಗೌಡ್ರು, ಅಕ್ಷಯ ನಾಯಕ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT