ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಗತಿಗೆ ವಿದ್ಯೆಯೇ ಪ್ರಮುಖ ಅಸ್ತ್ರ

ಸಂತಕವಿ ಸರ್ವಜ್ಞ ಜಯಂತಿಯಲ್ಲಿ ಕುಂಬಾರ ಸಮಾಜದ ವೈ.ಸುರೇಂದ್ರಬಾಬು ಹೇಳಿಕೆ
Last Updated 23 ಫೆಬ್ರುವರಿ 2019, 13:05 IST
ಅಕ್ಷರ ಗಾತ್ರ

ರಾಯಚೂರು: ಜಗತ್ತಿನಲ್ಲಿ ಪ್ರಗತಿ ಸಾಧಿಸಲು ವಿದ್ಯೆಯೇ ಪ್ರಮುಖ ಅಸ್ತ್ರವಾಗಿದ್ದು, ಕುಂಬಾರ ಸಮಾಜದವರು ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಬೆಳವಣಿಗೆ ಹೊಂದಬೇಕು ಎಂದು ಕುಂಬಾರ ಸಮಾಜದ ಹೈದರಾಬಾದ್ ಕರ್ನಾಟಕ ಭಾಗದ ಅಧ್ಯಕ್ಷ ವೈ.ಸುರೇಂದ್ರಬಾಬು ಹೇಳಿದರು.

ನಗರದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶನಿವಾರ ಆಯೋಜಿಸಿದ್ದ ಸಂತಕವಿ ಸರ್ವಜ್ಞ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಸರ್ಕಾರ ಹಲವು ಸೌಲಭ್ಯಗಳನ್ನು ಒದಗಿಸುತ್ತಿದ್ದು, ಯಾರಲ್ಲಿಯೂ ಬೇಡಬೇಕಾಗಿಲ್ಲ. ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಅಭಿವೃದ್ಧಿ ಹೊಂದಬೇಕಿದೆ ಎಂದು ತಿಳಿಸಿದರು.
ಕುಂಬಾರ ಸಮಾಜದವರು ಎಣಿಕೆಗೆ ಕಡಿಮೆ ಸಂಖ್ಯೆಯಿದ್ದರೂ, ಎಲ್ಲ ರಂಗಗಳಲ್ಲೂ ಗುರುತಿಸಿಕೊಂಡಿದ್ದಾರೆ. ಆದರೆ, ಸಮಾಜದಲ್ಲಿ ಒಗ್ಗಟ್ಟು ಇದ್ದರೆ ಮಾತ್ರ ಬೆಲೆ ಸಿಗಲಿದೆ. ಆದ್ದರಿಂದ ಮುಂದಿನ ಬಾರಿಯಿಂದ ಸರ್ವಜ್ಞ ಜಯಂತಿ ದಿನದಂದು ಸಮಾಜದ ಪ್ರತಿಯೊಬ್ಬರೂ ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸಬೇಕು ಎಂದರು.

ಜಗತ್ತಿನಲ್ಲಿ ಕುಂಬಾರ ಸಮಾಜದ ಜ್ಯೋತಿ ಬೆಳಗಿಸಿದ ಕೀರ್ತಿ ಸರ್ವಜ್ಞ ಅವರದ್ದಾಗಿದ್ದು, ಚಿಕ್ಕ ಸಮಾಜದಲ್ಲಿ ಹುಟ್ಟಿದ ಸರ್ವಜ್ಞ ಬಹುದೊಡ್ಡ ಸಾಧನೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಸಹ ಶಿಕ್ಷಕ ಗೋಪಾಲ ನಾಯಕ ಉಪನ್ಯಾಸ ನೀಡಿ, ಶಾಲೆ– ಕಾಲೇಜಿಗೆ ಹೋಗದಿದ್ದರೂ ಸಮಾಜವನ್ನು ತಿದ್ದುವ ಸಲುವಾಗಿ ತ್ರಿಪದಿ ವಚನಗಳನ್ನು ರಚನೆ ಮಾಡಿದ್ದಾರೆ. ಆದರೆ, ಸಾಕಷ್ಟು ವಚನಗಳು ಲಭ್ಯವಾಗಿಲ್ಲ. ಅವರ ವಚನಗಳ ಬಗ್ಗೆ ಸಂಶೋಧನೆ ನಡೆಯಬೇಕಾಗಿದೆ ಎಂದು ಹೇಳಿದರು.

ಅನುಭವವೇ ಅಮೃತವಾಗಿದ್ದು, ಅನುಭವದಿಂದಲೇ ಸರ್ವಜ್ಞ ಸಾಧನೆ ಮಾಡಿದ್ದು, ಅವರು ಸೇರಿದಂತೆ ಶರಣರು ಹಾಗೂ ಸಂತರು ಎಂದೂ ಸ್ವಾರ್ಥಕ್ಕಾಗಿ ಬದುಕಿಲ್ಲ. ಸಮಾಜದ ಸುಧಾರಣೆಗಾಗಿ ಜೀವಿಸಿದ್ದಾರೆ. ಆದ್ದರಿಂದ ಅವರಿಗೆ ಪೂಜೆ ಸಲ್ಲುತ್ತಿದೆ ಎಂದು ತಿಳಿಸಿದರು.

ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆಯಂತೆ ಸರ್ವಜ್ಞನಿಗೆ ತಿಳಿಯದೇ ವಿಷಯವಿಲ್ಲ. ಅವರು ಎಲ್ಲ ವಿಷಯಗಳ ಬಗ್ಗೆ ಜ್ಞಾನ ಹೊಂದಿದ್ದು, ಅವರೊಬ್ಬ ತತ್ವಜ್ಞಾನಿಯಾಗಿದ್ದಾರೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಬಿ.ನೀಲಮ್ಮ ಸ್ವಾಗತಿಸಿದರು. ಸಮಾಜದ ಜಿಲ್ಲಾ ಘಟಕ ಅಧ್ಯಕ್ಷ ಶಿವರಾಜ ಕುಮಾರ, ಮುಖಂಡರಾದ ವೀರಭದ್ರಪ್ಪ, ವೀರೇಶ, ನಾರಾಯಣ, ಬಸವರಾಜ, ಗೋವಿಂದ, ಸೋಮಪ್ಪ, ದಂಡಪ್ಪ ಬಿರಾದಾರ, ಪೂಜಾರ್, ಗಾಳೆಪ್ಪ, ತಿಮ್ಮಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT