ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಏಳಿಗೆಗೆ ಶ್ರಮಿಸಿದ ಚರಣಸಿಂಗ್‌: ರಂಗನಾಥ ಪಾಟೀಲ

Last Updated 23 ಡಿಸೆಂಬರ್ 2021, 14:03 IST
ಅಕ್ಷರ ಗಾತ್ರ

ರಾಯಚೂರು: ಚೌದರಿ ಚರಣಸಿಂಗ್‌ ಅವರು ದೇಶದ ಐದನೇ ಪ್ರಧಾನಮಂತ್ರಿಯಾಗಿದ್ದು, ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ರೈತರ ಏಳಿಗೆಗೆ ಶ್ರಮಿಸಿದ್ದಾರೆ ಎಂದು ಭಾರತೀಯ ಕಿಸಾನ್‌ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಕೆ.ರಂಗನಾಥ ಪಾಟೀಲ ಹೇಳಿದರು.

ನಗರದ ರಾಜೇಂದ್ರ ಗಂಜ್‌ನಲ್ಲಿ ಭಾರತೀಯ ಕಿಸಾನ್ ಸಂಘದಿಂದ ಚೌದರಿ ಚರಣಸಿಂಗ್‌ ಅವರ ಸ್ಮರಣಾರ್ಥ ಗುರುವಾರ ಆಯೋಜಿಸಿದ್ದ ‘ರಾಷ್ಟ್ರೀಯ ರೈತರ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಚರಣಸಿಂಗ್‌ ಅವರು ಡಿಸೆಂಬರ್‌ 23, 1902 ರಲ್ಲಿ ಮೀರತ್‌ ಜನಿಸಿದ್ದು, ಅವರಲ್ಲಿದ್ದ ರೈತ ಪರ ಕಾಳಜಿಯು ಇಂದಿನ ನಾಯಕರಲ್ಲಿ ಕಾಣೆಯಾಗಿದೆ ಎಂದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ದಳವಾಯಿ ಮಾತನಾಡಿ, ರೈತರು ಸಂಘಟಿತರಾದಾಗ ಮಾತ್ರ ಅವರ ಹಕ್ಕುಗಳನ್ನು ಪಡೆಯಲು ಸಾಧ್ಯ ಎಂದು ಹೇಳಿದರು.

ಸಂಘದ ಸದಸ್ಯರಾದ ಕೊಂಡಾ ರಾಜು ಹೀರಾಪುರ, ರಮೇಶ ಅಳಮಳಿ, ಶಂಕ್ರಪ್ಪಗೌಡ ಹೀರಾಪುರ, ಹನುಮಂತ ಊಟ ಸಿರವಾರ, ಎಂ.ವಿ.ಜಂಬಣ್ಣ, ಮೂಡಮಾಲ್‌ ಬಸವರಾಜ, ಲಕ್ಷ್ಮಣ, ಆಂಜನೇಯ್ಯ, ನರಸಿಂಗಪ್ಪ, ಅಂಜಪ್ಪ ಬೈರಂಪಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT