ರೈತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ರಾಯಚೂರು: ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ಕೇಂದ್ರ ಸರ್ಕಾರ ನಡೆಸುತ್ತಿರುವ ದೌರ್ಜನ್ಯವನ್ನು ಖಂಡಿಸಿ ಅಖಿಲ ಭಾರತ ರೈತ ಸಂಘರ್ಷ ಸಮಿತಿ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯುನಿಯನ್ಸ್ ಸಮಿತಿ, ಸ್ಟುಡೆಂಟ್ಸ್ ಪೆಡರೇಶನ್ ಆಫ್ ಇಂಡಿಯಾ ಸಂಘಟನೆಗಳ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಆನಂತರ ಜಿಲ್ಲಾಡಳಿತದ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು. ದೇಶದಾದ್ಯಂತ ರೈತರು ದೇಶ ವಿರೋಧಿ ಹಾಗೂ ಕಾರ್ಪೋರೇಟರ್ ಕಂಪನಿಗಳ ಪರವಾದ ಕಾಯ್ದೆಗಳನ್ನು ವಿರೋಧಿಸಿ ಕೋಟ್ಯಂತರ ರೈತರು ಪ್ರತಿಭಟನೆ ನಡೆಸುತ್ತಿದ್ದು, ರೈತರ ಒತ್ತಾಯಗಳನ್ನು ಪರಿಗಣಿಸಿ ರೈತರಿಗೆ ಗೌರವಿಸಿ ಕಾಯ್ದೆಗಳನ್ನು ವಾಪಸ್ ಪಡೆಯುವುದನ್ನು ಬಿಟ್ಟು ರೈತರ ಮೇಲೆ ಲಾಠಿ ಚಾರ್ಜ್, ಟಿಯರ್ ಗ್ಯಾಸ್, ವಾಟರ್ ಕ್ಯಾನನ್ ಮೂಲಕ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡಿ ಉದ್ಧಟನ ತೋರುವುದು ಸರಿಯಲ್ಲ ಎಂದು ದೂರಿದರು.
ರೈತರು ಕೃಷಿಯನ್ನು ಸಂರಕ್ಷಿಸಲು, ಡಾ.ಎಂ.ಎಸ್ ಸ್ವಾಮಿನಾಥನ್ ಅವರ ಕೃಷಿ ಆಯೋಗದ ಸಲಹೆಯಂತೆ ಕೃಷಿ ಉತ್ಪನ್ನಗಳ ಮೇಲೆ ಸೂಕ್ತ ಬೆಂಬಲವನ್ನು ಖಾತರಿ ಪಡಿಸುವ ಕಾಯ್ದೆಯನ್ನು ಮತ್ತು ರೈತರಿಗೆ ಬಡ್ಡಿರಹಿತ ಅಗತ್ಯ ಸಾಲ ಒದಗಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಕರಿಯಪ್ಪ, ರೈತ ಸಂಘದ ಮುಖಂಡ ಸೂಗೂರಯ್ಯ ಆರ್.ಎಸ್ ಮಠ, ಸಿಐಟಿಯುನ ಜಿಲ್ಲಾ ಕಾರ್ಯದರ್ಶಿ ಡಿ.ಎಸ್ ಶರಣಬಸವ, ಕೆ.ಜಿ. ವೀರೇಶ, ವರಲಕ್ಷ್ಮಿ, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಜಿಂದಪ್ಪ, ಮಾರೆಪ್ಪ ಹರವಿ, ಖಾಜಾ ಅಸ್ಲಾಂ ಪಾಷಾ, ರಾಮಣ್ಣ ಜಾನೆಕಲ, ಎಚ್ ಪದ್ಮಾ, ರಂಗನಗೌಡ, ರಂಗಪ್ಪ, ಶಿವಕುಮಾರ ಮ್ಯಾಗಳಮನಿ, ಲಿಂಗರಾಜ, ಬಸವರಾಜ, ತಿಮ್ಮಪ್ಪ ವಡ್ಲೂರು ಇದ್ದರು
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.