ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ನದಿ ತೀರದ ಜಮೀನುಗಳು ಜಲಾವೃತ

Last Updated 9 ಆಗಸ್ಟ್ 2020, 12:46 IST
ಅಕ್ಷರ ಗಾತ್ರ

ಶಕ್ತಿನಗರ: ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುತ್ತಿರುವುದರಿಂದ ನದಿ ತಟದ ಗ್ರಾಮಗಳ ಜಮೀನುಗಳು ಜಲಾವೃತಗೊಂಡು ಬೆಳೆಗಳಿಗೆ ಹಾನಿಯಾಗಿವೆ.

ನಾರಾಯಣಪುರ ಜಲಾಶಯದಿಂದ 1.80 ಲಕ್ಷ ಕ್ಯುಸೆಕ್ ನೀರನ್ನು ಕೃಷ್ಣಾನದಿಗೆ ಹರಿಬಿಡಲಾಗಿದೆ. ಕಾಡ್ಲೂರು ಉಪೇಂದ್ರತೀರ್ಥ ಕರಾರ್ಚಿತ ಪ್ರಾಣದೇವರ ದೇವಸ್ಥಾನ ಭಾಗಶಃ ಮುಳುಗಡೆಯಾಗಿದೆ. ಮುಂಗಾರು ಮಳೆಗೆ ಅಷ್ಟಿಷ್ಟು ಬಿತ್ತನೆ ಮಾಡಿಕೊಂಡಿದ್ದರು. ನದಿ ತೀರದ ಗುರ್ಜಾಪುರ, ಅರಷಣಿಗಿ, ಗಂಜಳ್ಳಿ ಗ್ರಾಮಗಳ ಜಮೀನುಗಳು ಜಲಾವೃತಗೊಂಡಿದೆ.

’ಪ್ರವಾಹ ಇದೇ ಸ್ಥಿತಿ ಮುಂದುವರೆದರೆ ಜಮೀನುಗಳ ಬೆಳೆಯ ಜತೆಗೆ ಮಣ್ಣು ಕೊಚ್ಚಿ ಹೋಗಿ ಭೂಮಿ ಬರಾಡಗುತ್ತವೆ. ಸರ್ಕಾರ ಪ್ರವಾಹ ಸಂದರ್ಭಗಳಲ್ಲಿ ಇಲ್ಲಿವರೆಗೆ ಬಿಡಿಗಾಸೂ ನೀಡಿಲ್ಲ. ನದಿಗೆ ನೀರು ಬಿಡುವ ಜಿಲ್ಲಾಡಳಿತ, ರೈತರಿಗೆ ಮಾಹಿತಿ ನೀಡದ ಕಾರಣ, ನದಿ ದಡದಲ್ಲಿರುವ ಪಂಪ್‌ಸೆಟ್‌ಗಳು ಸಂಪೂರ್ಣ ಮುಳುಗಡೆ ಆಗಿವೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸರ್ವೆ ನಡೆಸಿ ವೈಜ್ಞಾನಿಕ ಪರಿಹಾರ ಕೊಡಿಸಬೇಕು‘ ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ದೇವಸೂಗೂರು ಗ್ರಾಮ ಘಟಕದ ಅಧ್ಯಕ್ಷ ನರಸಪ್ಪ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT