ಬುಧವಾರ, ಏಪ್ರಿಲ್ 14, 2021
25 °C

ರಾಯಚೂರು: ನಾಪತ್ತೆಯಾಗಿದ್ದ ಮಾಜಿ ಶಾಸಕರ ಮೊಮ್ಮಕ್ಕಳು ಶವವಾಗಿ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಜಿಲ್ಲೆಯ ಸಿರವಾರ ತಾಲ್ಲೂಕಿನ ಬಲ್ಲಟಗಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಮಕ್ಕಳಿಬ್ಬರು ಹೊಂಡವೊಂದರಲ್ಲಿ ಶವವಾಗಿ ಸೋಮವಾರ ಪತ್ತೆಯಾಗಿದ್ದಾರೆ.

ಮಾಜಿ ಶಾಸಕ ಹಂಪಯ್ಯ ನಾಯಕ ಅವರ ಕಿರಿಯ ಪುತ್ರ ಶಿವಾನಂದರ ಮಕ್ಕಳಾದ ವರುಣ ನಾಯಕ (11), ತನಯ ನಾಯಕ (5) ಮೃತರಾಗಿದ್ದಾರೆ.

ಆಟವಾಡಲು ಮನೆಯಿಂದ ಹೊರಹೋಗಿದ್ದ ಇಬ್ಬರು ಬಾಲಕರು ಸಂಜೆಯಾದರೂ ಹಿಂತಿರುಗಿ ಬಂದಿರಲಿಲ್ಲ. ಭಾನುವಾರ ಸಂಜೆಯಿಂದ ಮನೆಯವರು ಗಾಬರಿಯಾಗಿ ಎಲ್ಲ ಕಡೆಗೂ ಹುಡುಕಾಟ ಆರಂಭಿಸಿದ್ದರು.

ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.