ಸೋಮವಾರ, ಡಿಸೆಂಬರ್ 5, 2022
21 °C

ಲೋಕಾಯುಕ್ತ ಬಲೆಗೆ ನಾಲ್ವರು ಎಂಜಿನಿಯರುಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಇಲ್ಲಿನ ಯರಮರಸ್‌ನಲ್ಲಿರುವ ತುಂಗಭದ್ರಾ ನೀರಾವರಿ ವಲಯ ಕಚೇರಿಯಲ್ಲಿ ಸೂಪರಿಡೆಂಟ್‌ ಎಂಜಿನಿಯರ್‌ ಸೇರಿ ನಾಲ್ವರು ಎಂಜಿನಿಯರುಗಳು ಗುರುವಾರ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಪ್ರಕರಣ ದಾಖಲಿಸಿದ್ದಾರೆ.

ಸೂಪರಿಡೆಂಟ್‌ ಎಂಜಿನಿಯರ್ ಸೂರ್ಯಕಾಂತ್‌, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ನರಸಿಂಹರಾವ್‌ ದೇಶಪಾಂಡೆ, ಕಿರಿಯ ಎಂಜಿನಿಯರುಗಳಾದ ತುಕಾರಾಂ ಮತ್ತು ಭಾವನಾ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.

ಬಿಲ್‌ ಪಾಸ್‌ ಮಾಡಿಕೊಡಲು ಲಂಚ ನೀಡುವಂತೆ ಬಳ್ಳಾರಿಯ ಗುತ್ತಿಗೆದಾರರೊಬ್ಬರಿಗೆ ಎಂಜಿನಿಯರುಗಳು ಬೇಡಿಕೆ ಸಲ್ಲಿಸಿದ್ದರು. ಈ ಬಗ್ಗೆ ಲೋಕಾಯುಕ್ತರಿಗೆ ಮಾಹಿತಿ ನೀಡಿದ್ದ ಗುತ್ತಿಗೆದಾರ, ಎಂಜಿನಿಯರುಗಳಿಗೆ ಲಂಚ ನೀಡುವಾಗ ಯಶಸ್ವಿ ದಾಳಿ ನಡೆಸಲಾಗಿದೆ.
ಲೋಕಾಯುಕ್ತ ಎಸ್‌ಪಿ ಸಲೀಂ ಪಾಷಾ, ಡಿವೈಎಸ್‌ಪಿ ಕಲ್ಲೇಶಪ್ಪ, ಪೊಲೀಸ್‌ ಇನ್ಸ್‌ಪೆಕ್ಟರ್‌ ಗುರು ಪಾಟೀಲ ಹಾಗೂ ಸಿಬ್ಬಂದಿ ಈ ದಾಳಿ ನಡೆಸಿದವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು