ಸ್ಪರ್ಧಾತ್ಮಕ ಪರೀಕ್ಷೆ: 16ಕ್ಕೆ ಉಚಿತ ಕಾರ್ಯಾಗಾರ

7

ಸ್ಪರ್ಧಾತ್ಮಕ ಪರೀಕ್ಷೆ: 16ಕ್ಕೆ ಉಚಿತ ಕಾರ್ಯಾಗಾರ

Published:
Updated:

ರಾಯಚೂರು: ನಗರದ ಆರ್ಯನ್‌ ಕರಿಯರ್‌ ಅಕಾಡೆಮಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವವರಿಗಾಗಿ ಸೆಪ್ಟೆಂಬರ್‌ 16 ರಂದು ಉಚಿತ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ ಎಂದು ಅಕಾಡೆಮಿ ನಿರ್ದೇಶಕ ಶಾಮಣ್ಣ ಮದ್ದೂರ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಟೇಷನ್‌ ರಸ್ತೆಯ ರಾಮಮಂದಿರ ಎದುರು ಸಾಯಿರಾಮ ಕಟ್ಟಡದಲ್ಲಿ ಬೆಳಿಗ್ಗೆ 10 ರಿಂದ ಕಾರ್ಯಾಗಾರ ಆರಂಭವಾಗುವುದು. ಬೆಂಗಳೂರಿನ ಸಂಪನ್ಮೂಲ ವ್ಯಕ್ತಿ ಶ್ರೀಮಂತ ಅವರು ಮಾನಸಿಕ ಸಾಮರ್ಥ್ಯದ ಕುರಿತು ಹಾಗೂ ಧಾರವಾಡದ ಸಂ‍ಪನ್ಮೂಲ ವ್ಯಕ್ತ ಸಂತೋಷ ಜವಳಿ ಅವರು ಭೂಗೋಳ ಮತ್ತು ಇತಿಹಾಸ ವಿಷಯಗಳ ಕುರಿತು ಮಾಹಿತಿ ನೀಡುವರು. ಆಸಕ್ತರು ಸಂವಾದ ಮಾಡಬಹುದು ಎಂದು ತಿಳಿಸಿದರು.

ಹೆಚ್ಚಿನ ಮಾಹಿತಿಗಾಗಿ 9880569090.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !