ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಬ್ಬೂರು: ಆಸರೆಯಾದ ಶತಮಾನದ ಶಾಲೆ

300ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಅಭ್ಯಾಸ
Published 11 ಜನವರಿ 2024, 7:07 IST
Last Updated 11 ಜನವರಿ 2024, 7:07 IST
ಅಕ್ಷರ ಗಾತ್ರ

ದೇವದುರ್ಗ: ಗಬ್ಬೂರು ಗ್ರಾಮದ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಗೆ ಸ್ವಂತ ಕಟ್ಟಡವಿಲ್ಲದೆ 100 ವರ್ಷ ಪೂರೈಸಿದ ಹಳೆಯ ಕಟ್ಟಡವೇ ಆಸರೆಯಾಗಿದೆ.

ಸರ್ಕಾರ ಬಾಲಕಿಯರ ಶಾಲೆಗಳನ್ನು ಪ್ರತ್ಯೇಕಿಸಿ, ಶಿಕ್ಷಣ ಒದಗಿಸುವ ಬರದಲ್ಲಿ ಮೂಲಸೌಕರ್ಯ ಒದಗಿಸುವುದನ್ನು ಮರೆತಿದೆ.

ಗಬ್ಬೂರು ಗ್ರಾಮದಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದ ಅಂದಿನ ಕನ್ನಡ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡದಲ್ಲಿ ಸುಮಾರು 300ಕ್ಕೂ ಹೆಚ್ಚು ಬಾಲಕಿಯರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಸ್ಥಳೀಯ ಕಲ್ಲುಗಳಿಂದ 1922ರಲ್ಲಿ ನಿರ್ಮಾಣವಾದ ಹಳೆ ಶಾಲೆಯ 16 ಕೊಠಡಿಗಳ ಪೈಕಿ 14 ಕಟ್ಟಡ ಬಳಕೆಗೆ ಯೋಗ್ಯವಾದ ಸ್ಥಿತಿಯಲ್ಲಿವೆ. ಉಳಿದ ಎರಡು ಕಟ್ಟಡಗಳು ಬೀಳುವ ಹಂತ ತಲುಪಿದೆ. ಆದರೆ ಮಳೆ ಬಂದರೆ ಎಲ್ಲ ಕಟ್ಟಡಗಳು ಸೋರುತ್ತವೆ.

ಈ ಮುಂಚೆ ಈ ಕಟ್ಟಡದಲ್ಲಿ ನಡೆಯುತ್ತಿದ್ದ ಸರ್ಕಾರಿ ಕನ್ನಡ ಮಾದರಿಯ ಪ್ರಾಥಮಿಕ ಶಾಲೆಯನ್ನು ಬಸ್ ನಿಲ್ದಾಣದ ಹತ್ತಿರ ಕಲ್ಯಾಣ ಕರ್ನಾಟಕ ಕಲ್ಯಾಣ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ₹1 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು.

ಕಳೆದ ಎರಡು ವರ್ಷದಿಂದ ಗ್ರಾಮದಲ್ಲಿನ ಹಳೆಯ ವಿದ್ಯಾರ್ಥಿಗಳು ತಾವು ಕಲಿತ ಶಾಲೆಯ ಸಂರಕ್ಷಣೆಗೆ ಮುಂದಾಗಿ ಶಾಲೆಯಲ್ಲಿ ಕಲಿತ ಉನ್ನತ ಸ್ಥಾನದಲ್ಲಿರುವ ವಿದ್ಯಾರ್ಥಿಗಳಿಂದ ದೇಣಿಗೆ ಸಂಗ್ರಹಿಸಿ ಶಾಲೆಗೆ ಬಣ್ಣ ಹಚ್ಚಿದ್ದಾರೆ. ಶಾಲೆಯಲ್ಲಿ 2000-2001 ನೇ ಸಾಲಿನಲ್ಲಿ ನಿರ್ಮಾಣವಾಗಿದ್ದ ಶೌಚಾಲಯಗಳನ್ನು ಸ್ಥಳೀಯ ಯುವ ಬ್ರಿಗೇಡ್ ಕಾರ್ಯಕರ್ತರ ಸಹಕಾರದಿಂದ ಅಭಿವೃದ್ಧಿಪಡಿಸಿದ್ದಾರೆ.

ಮಾಸಿದ ಗೋಡೆಗಳಿಗೆ ಬಣ್ಣ ಬಳಿದು ಪಳಪಳ ಹೊಳೆಯುವಂತೆ ಮಾಡಿದ್ದಾರೆ. ಗಾದೆ ಮಾತುಗಳನ್ನು ಬರೆಯಿಸಿ ಹಳೆಯ ನೆನಪುಗಳು ಹಾಗೆ ಉಳಿಯುವ ರೀತಿಯಲ್ಲಿ ಮಾಡಿದ್ದಾರೆ. ಆವರಣದಲ್ಲಿ ಸಸಿಗಳನ್ನು ನಾಟಿ ಮಾಡಿದ್ದಾರೆ.

ಶತಮಾನದ ಕಟ್ಟಡದಲ್ಲಿ ಬಾಲಕಿಯರ ಶಾಲೆ ನಡೆಯುತ್ತಿರುವದರಿಂದ ಗ್ರಾಮ ಪಂಚಾಯಿತಿಗೆ ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆ ಮಾಡಿ ಎಂದು ಹಲವು ಬಾರಿ ಮನವಿ ಮಾಡಿದರು ಪ್ರಯೋಜನವಾಗಿಲ್ಲ ಎನ್ನುತ್ತಾರೆ ಅಲ್ಲಿನ ಶಿಕ್ಷಕರು.

ಶತಮಾನ ಪೂರೈಸಿದ ಶಾಲೆಗಳಿಗೆ ಸರ್ಕಾರ ನೀಡುತ್ತಿರುವ ₹16 ಲಕ್ಷ ಅನುದಾನದ ಮಾಹಿತಿ ಶತಮಾನದ ಪೂರೈಸಿದ ಮುಖ್ಯ ಶಿಕ್ಷಕರು ಮತ್ತು ಪ್ರಸ್ತುತ ಕಟ್ಟಡದಲ್ಲಿ ಇರುವ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರಿಗೆ ಇಲ್ಲ.

ದೇವದುರ್ಗ ತಾಲ್ಲೂಕಿನ ಗಬ್ಬೂರು ಗ್ರಾಮದಲ್ಲಿನ ಬಾಲಕಿಯ ಹಿರಿಯ ಪ್ರಾಥಮಿಕ ಶಾಲೆ
ದೇವದುರ್ಗ ತಾಲ್ಲೂಕಿನ ಗಬ್ಬೂರು ಗ್ರಾಮದಲ್ಲಿನ ಬಾಲಕಿಯ ಹಿರಿಯ ಪ್ರಾಥಮಿಕ ಶಾಲೆ
ಶಾಲೆಯ ದುಸ್ಥಿತಿ ನೋಡಿ ಹಳೆಯ ವಿದ್ಯಾರ್ಥಿಗಳು ಸ್ವಯಂ ಪ್ರೇರಿತ ಸಹಕಾರಕ್ಕೆ ಮುಂದಾದರು. ಶೌಚಾಲಯ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ.
ಶಿವಪ್ಪ ಹೂಗಾರ ಮುಖ್ಯ ಶಿಕ್ಷಕ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ಗಬ್ಬೂರು
ಸರ್ಕಾರಿ ಶಾಲೆಗಳಲ್ಲಿ ಸೌಕರ್ಯಗಳ ಕೊರತೆಯಿಂದ ಪಾಲಕರು ಮಕ್ಕಳನ್ನು ಖಾಸಗಿ ಶಾಲೆಗೆ ಕಳಿಸುತ್ತಿದ್ದಾರೆ. ಸರ್ಕಾರ ಬಾಲಕಿಯರ ಶಾಲಾ ಕಾಲೇಜುಗಳಿಗೆ ಕನಿಷ್ಠ ಶೌಚಾಲಯವಾದರೂ ನಿರ್ಮಿಸಬೇಕು.
ಷಣ್ಮುಖ ಶಾಲೆಯ ಹಳೆಯ ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT