ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ಒತ್ತು: ಸಚಿವ ಬೋಸರಾಜು

Published : 8 ಸೆಪ್ಟೆಂಬರ್ 2024, 16:06 IST
Last Updated : 8 ಸೆಪ್ಟೆಂಬರ್ 2024, 16:06 IST
ಫಾಲೋ ಮಾಡಿ
Comments

ರಾಯಚೂರು: ‘ಹಿಂದುಳಿದ ಕಲ್ಯಾಣ ಕರ್ನಾಟಕದ ಭಾಗದ ಜಿಲ್ಲೆಗಳಲ್ಲಿ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ನೀಡಿ ಸಹಕಾರ ಮಾಡುತ್ತಿದೆ’ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್ ಬೋಸರಾಜು ಹೇಳಿದರು. 

ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾನುವಾರ ಕಲಾ ಸಂಕುಲ ಸಂಸ್ಥೆಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.

ಕಲಾ  ಸಂಕುಲ ಸಂಸ್ಥೆ ನಿರಂತರವಾಗಿ ಕಲೆ ಸಾಹಿತ್ಯಕ ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿರುವ ಆದರ್ಶ ಶಿಕ್ಷಕರಿಗೆ ಗುರುತಿಸಿ ಗೌರವಿಸುವುದು ಉತ್ತಮ ಕೆಲಸವಾಗಿದೆ ಎಂದು ಶ್ಲಾಘಿಸಿದರು. 

ಕಾರ್ಯಕ್ರಮದ ಆರಂಭದಲ್ಲಿ ಕಪಗಲ್ ಹತ್ತಿರ ಅಪಘಾತದಲ್ಲಿ ಮೃತಪಟ್ಟ ಮಕ್ಕಳಿಗೆ ಸಂತಾಪ ಸೂಚಿಸಲಾಯಿತು. ಸರ್ವಪಲ್ಲಿ ರಾಧಾಕೃಷ್ಣ ಭಾವಚಿತ್ರಕ್ಕೆ ಪೂಜಿ ಸಲ್ಲಿಸಲಾಯಿತು. 

ಸರ್ಕಾರಿ ಶಾಲೆ ಉಳುವಿಗೆ ಪಣ: ಅಕ್ಷರ ಸಂತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಮಾತನಾಡಿ, ಸರ್ಕಾರಿ ಶಾಲೆ ಉಳಿಸಲು ಎಲ್ಲರೂ ಪಣ ತೊಡಬೇಕು. ನಿಮ್ಮೂರಿನ ಶಾಲೆಗಳ ಅಭಿವೃದ್ಧಿಗಾಗಿ ಶ್ರಮಿಸಬೇಕು. ಯಾರು ಸಹ ಸರ್ಕಾರಿ ಶಾಲೆಗಳನ್ನು ಕಡೆಗಣಿಸಬಾರದು. ನಮ್ಮೂರಲ್ಲಿ ಶಾಲೆ ಇರಲಿಲ್ಲ. ಹಾಗಾಗಿ ನಾನು ಅವಿದ್ಯಾವಂತನಾಗಿದ್ದೇನೆ ಅದಕ್ಕಾಗಿಯೇ ನಾನು ಶಾಲೆ ಕಟ್ಟಲು ಪ್ರಯತ್ನಪಟ್ಟೆ ಎಂದು ಹೇಳಿದರು. 

ಸೇವಾ ಕಾಲೇಜಿನ  ಶರಣಬಸವ ಪಾಟೀಲ ಜೋಳದಡಗಿ ಮಾತನಾಡಿದರು.

ಸಾಧಕರಿಗೆ ಪ್ರಶಸ್ತಿ ಪ್ರದಾನ: ಮಂಗಳೂರಿನ ಸಂಗೀತ ಶರ್ಮಾ ಶಿಕ್ಷಕಿ ಮತ್ತು ಪೆರುವಾಯಿಗ್ರಾಮ ಪಂಚಾಯಿತಿ ಅಧ್ಯಕ್ಷೆ ನಫೀಸ್, ಕಿರುತೆರೆನಟಿ ರಜಿನಿ ಬೆಂಗಳೂರು ಹಾಗೂ ಕಲಾವಿದೆ ಭಾರತಿ ಗೋಪಾಲ್ ಹೆಬ್ರಿ, ಮಹಮ್ಮದ್ ಶರೀಫ್, ಶಿಕ್ಷಕಿ ಪದ್ಮಜಾ, ನಾಗರತ್ನ ಮಂಡ್ಯ ಮುಂತಾದ ಆದರ್ಶ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವೈದ್ಯರತ್ನ ಪ್ರಶಸ್ತಿ ಡಾ.ಎನ್.ವಿಜಯಶಂಕರ್ ಅವರನ್ನು ಅಭಿನಂದಿಸಲಾಯಿತು. ಕಲಾ ಸಂಕುಲ ಸಂಸ್ಥೆಯ ಅಧ್ಯಕ್ಷೆ ರೇಖಾ ಬಡಿಗೇರ್, ಕೇರಳದ ಲಿಬೀನ್ ಕೃಷ್ಣ, ಕಲಾವಿದರಾದ ಅಮರಗೌಡ, ಮಹಾಲಕ್ಷ್ಮಿ, ಚಿರಂಜೀವಿ ಯಾದವ್, ಸೈಯದ್ ಅಲಿ, ಮೌನೇಶ, ಮಹೇಶ, ಗೋವಿಂದ ವಡವಾಟಿ  ಭಾಗವಹಿಸಿದ್ದರು

ಸಂಸ್ಥೆಯ ಕಾರ್ಯದರ್ಶಿ ಮಾರುತಿ ಬಡಿಗೇರ್ ಸ್ವಾಗತಿಸಿದರು. ವಿಜಯ ರಾಜೇಂದ್ರ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT