ಮಾನ್ವಿ: ಸೇವೆ ಕಾಯಂಗೊಳಿಸಲು ಆಗ್ರಹಿಸಿ ಪಟ್ಟಣದ ಬಾಷುನಿಯಾ ಸಾಹುಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ಶನಿವಾರ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ಹಲವು ವರ್ಷಗಳಿಂದ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರು ಜೀವನ ಭದ್ರತೆ ಇಲ್ಲದೆ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಸರ್ಕಾರ ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸಲು ಮುಂದಾಗುತ್ತಿಲ್ಲ. ನ.23ರಿಂದ ರಾಜ್ಯಾದಾದ್ಯಂತ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಅತಿಥಿ ಉಪನ್ಯಾಸಕರು ತಿಳಿಸಿದರು.

ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಕಾಲೇಜಿನ ಪ್ರಾಂಶುಪಾಲ ಜೆ.ಎಲ್.ಈರಣ್ಣ ಅವರಿಗೆ ಸಲ್ಲಿಸಲಾಯಿತು.

ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಶರಣಬಸವ ಮದ್ಲಾಪುರ, ಪದಾಧಿಕಾರಿಗಳಾದ ಬಸವರಾಜ ಸುಂಕೇಶ್ವರ, ಎನ್.ವಿರುಪನಗೌಡ, ಇಮ್ತಿಯಾಜ್ ಪಾಷಾ, ರಾಜಶೇಖರ ಪಾಟೀಲ, ಚಂದ್ರು ಹೆಳವರ್, ಶರಣಬಸವ ಬೆಟ್ಟದೂರು, ಡಾ.ಹುಲಿಯಪ್ಪ ಧುಮತಿ, ಬಸವರಾಜ ಚಿಗರಿ, ಕೃಷ್ಣ, ಧನಂಜಯ, ವಿರುಪಣ್ಣ, ಶರಣಪ್ಪ ಪಾಟೀಲ್, ರಮ್ಯಾ, ಶಾರದಮ್ಮ, ನಮ್ರತಾ, ಮಧುರಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.