ಶುಕ್ರವಾರ, ಏಪ್ರಿಲ್ 10, 2020
19 °C

ಶ್ರೀ ರಾಘವೇದ್ರ ಗುರು ವೈಭವೋತ್ಸವ ನಾಳೆಯಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಗುರು ವೈಭವೋತ್ಸವ ಸಮಾರಂಭಗಳು ಫೆಬ್ರುವರಿ 25 ರಿಂದ ಆರಂಭಾಗಲಿದ್ದು, ಮಾರ್ಚ್‌ 2 ರಂದು ಮುಕ್ತಾಯವಾಗಲಿವೆ.

25 ರಂದು ಶ್ರೀ ಗುರುರಾಜರ ಪಟ್ಟಾಭಿಷೇಕ ಉತ್ಸವ ಹಾಗೂ ಮಾರ್ಚ್‌ 2 ರಂದು ವರ್ಧಂತಿ ಉತ್ಸವ ನೆರವೇರಿಸಲಾಗುವುದು. ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ಹಲವು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಪ್ರತಿದಿನ ಬೆಳಿಗ್ಗೆ 10 ರಿಂದ ಮಠದ ಪ್ರಾಕಾರದಲ್ಲಿ ವಿಶೇಷ ಉಪನ್ಯಾಸ. ಸಂಜೆ 6 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು. ಸಂಜೆ 7 ಗಂಟೆಗೆ ಯೋಗೀಂದ್ರ ಮಂಟಪದಲ್ಲಿ ಅಭಿನಂದನಾ ಮತ್ತು ಅಭಿವಂದನಾ ಕಾರ್ಯಕ್ರಮ.

ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ತಮಿಳುನಾಡು ಉಪಮುಖ್ಯಮಂತ್ರಿ ಪನ್ನಿರಸೇಲ್ವಂ, ಆಂಧ್ರದ ಸಚಿವರಾದ ಬುಗ್ಗನ ರಾಜೇಂದ್ರನಾಥ ರೆಡ್ಡಿ, ಗಮ್ಮನುರ ಜೈರಾಂ, ಕರ್ನೂಲ್‌ ಸಂಸದ ಕೆ.ಸಂಜೀವಕುಮಾರ್‌, ಮಂತ್ರಾಲಯ ಶಾಸಕ ವೈ.ಬಾಲನಾಗಿರೆಡ್ಡಿ, ತಮಿಳುನಾಡು ಶಾಸಕ ಕೆ.ಕುಪ್ಪನ್‌, ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಅನಿಲಕುಮಾರ್ ಸಿಂಘಾಲ್‌, ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ.ಧರ್ಮರೆಡ್ಡಿ, ಬೆಂಗಳೂರಿನ ಎಡಿಜಿಪಿ ಭಾಸ್ಕರ್‌ ರಾವ್‌, ಕೇರಳ ಐಜಿ ಎಚ್‌.ವೆಂಕಟೇಶ, ತಿರುವನಂತಪುರದ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ವಿ.ರಥೀಶನ್‌, ರಾಜಸ್ಥಾನದ ತಿಜಾರಾ ಮಧ್ವಮಠ ಪ್ರೇಮಭಕ್ತಿ ಪೀಠದ ಪೀಠಾಧಿಪತಿ ಸ್ವಾಮಿ ಲಲಿತ ಮೋಹನಾಚಾರ್ಯ, ಮಹಾರಾಷ್ಟ್ರದ ಮನ್ಮಾಡ ರಾಜಾ ಎನ್‌. ಕುಮಾರನ್‌ ಸೇತುಪತಿ, ರಾಣಿ ಎನ್‌.ಲಕ್ಕುಮಿ ನಚಿಯಾರ್‌, ತ್ರಿವೇಂದ್ರಮ್‌ ಸಂಸ್ಥಾನದ ರಾಜಾ ಅವಿತ್ತೋಂ ತಿರುನಾಳ ಆದಿತ್ಯವರ್ಮ, ಚಿತ್ರನಟ ಪುನೀತ್‌ರಾಜಕುಮಾರ್‌, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಿ.ಬಿ.ನಾಯಕ, ದಾಸ ಸಾಹಿತ್ಯದ ಸಂಶೋಧಕ ಲಕ್ಷ್ಮೀಕಾಂತ ಪಾಟೀಲ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್‌.ಸಿ.ರಮೇಶ, ಕೆಆರ್‌ಐಡಿಎಲ್‌ ಮುಖ್ಯ ಎಂಜಿನಿಯರ್‌ ರಂಗಾರಾಂ ನಾಯಕ, ಕರ್ನಾಟಕ ಬ್ಯಾಂಕ್‌ ಅಧ್ಯಕ್ಷ ಮಹಾಬಲೇಶ್ವರ ಭಟ್ಟ್‌, ವಿಜಯವಾಡ 10 ಟಿವಿ ಸಂಪಾದಕಿ ಸ್ವಪ್ನಾ ಅಶೋಕ, ದಾನಿ ಪ್ರಕಾಶ ಶೆಟ್ಟಿ, ಚೆನ್ನೈ ಟಿವಿಎಸ್‌ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸಾಚಾರ್ಯ, ಇಎನ್‌ಜಿ ವಿಶೇಷ ತಜ್ಞ ಡಾ.ವಾಜಿಯೀಂದ್ರ, ಸಾಗರ ಆಸ್ಪತ್ರೆಯ ವೈದ್ಯ ಡಾ. ಹೇಮಚಂದ್ರ ಸಾಗರ, ಹೈದರಾಬಾದ್‌ ಉದ್ಯಮಿ ರಾಮಸ್ವಾಮಿ ವೆಂಕಟರಮನ್‌, ಅರ್ಥೋಸ್ಕೊಪಿಕ್‌ ಸರ್ಜನ್‌ ಡಾ.ಅಲ್ಲಾಡು ಹೇಮಂತಕುಮಾರ್‌, ತೆಲಂಗಾಣ ಹೈಕೋರ್ಟ್‌ ಸಿನಿಯರ್‌ ಕೌನ್ಸೆಲ್‌ ಎಸ್‌.ನಿರಂಜನ ರೆಡ್ಡಿ ಅವರು ವೈಭವೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುವರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು