ಭಾನುವಾರ, ಮಾರ್ಚ್ 7, 2021
32 °C

ಹಟ್ಟಿ ಚಿನ್ನದ ಗಣಿ: 20 ಕೆಜಿ ಅಧಿಕ ಚಿನ್ನ ತಯಾರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಟ್ಟಿ ಚಿನ್ನದ ಗಣಿ (ರಾಯಚೂರು): ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ 392 ಕೆಜಿ ಚಿನ್ನ ತಯಾರಿಸಲಾಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ 20 ಕೆಜಿ ಅಧಿಕ ಚಿನ್ನ ತಯಾರಿಕೆಯಾಗಿದೆ.

2019–20 ಸಾಲಿನಲ್ಲಿ ಒಟ್ಟು 1,750 ಕೆಜಿ ಚಿನ್ನ ತಯಾರಿಸುವ ಗುರಿ ಇಟ್ಟುಕೊಳ್ಳಲಾಗಿದೆ. 2018–19ನೇ ಸಾಲಿನಲ್ಲಿ 1,700 ಕೆಜಿ ಚಿನ್ನ ತಯಾರಿಸುವ ಗುರಿ ಹೊಂದಿದ್ದರೂ 1,661 ಕೆಜಿ ಸಿದ್ಧಪಡಿಸುವುದಕ್ಕೆ ಸಾಧ್ಯವಾಗಿತ್ತು. 2017–18 ಸಾಲಿನಲ್ಲಿ 1,640 ಕೆಜಿ ಚಿನ್ನ ತಯಾರಿಸಲಾಗಿತ್ತು.

ಒಂಟು ಟನ್‌ ಅದಿರಿನಿಂದ ಸರಾಸರಿ 2.62 ಗ್ರಾಂ ಚಿನ್ನ ಪಡೆಯುವುದಕ್ಕೆ ಸಾಧ್ಯವಾಗಿದೆ ಎಂದು ಕಂಪೆನಿ ತಿಳಿಸಿದೆ. 2017- 18 ನೇ ಸಾಲಿನಲ್ಲಿ ₹30 ಕೋಟಿ ಹಾಗೂ 2018- 19ನೇ ಸಾಲಿನಲ್ಲಿ ₹80 ಕೋಟಿ ನಿವ್ವಳ ಲಾಭ ಬಂದಿತ್ತು. ಇತ್ತೀಚಿನ ವರ್ಷಗಳಲ್ಲಿ ಕಂಪೆನಿಯ ನಿವ್ವಳ ಲಾಭ ಏರಿಕೆಯಾಗುತ್ತಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

‘ಗಣಿ ಕಂಪನಿಯು ಪ್ರತಿದಿನ 2,000 ಟನ್ ಅದಿರು ಸಂಸ್ಕರಣೆ ಸಾಮರ್ಥ್ಯ ಹೊಂದಿದ್ದು, ಮುಂದಿನ ವರ್ಷ ಎರಡು ಹೊಸ ಮಿಲ್‌ ಪ್ರಾರಂಭಿಸಲಾಗುವುದು. ಆನಂತರ ದಿನಕ್ಕೆ 3,500 ಟನ್ ಅದಿರು ಸಂಸ್ಕರಿಸಲಾಗುವುದು’ ಎಂದು ಕಂಪನಿ ವ್ಯವಸ್ಥಾಪಕ ನಿರ್ದೇಶಕ ಡಾ.ರಿಚರ್ಡ ವಿನ್ಸಂಟ್ ಡಿಸೋಜಾ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು