ಅಮರೇಶ ನಾಯಕ

ಹಟ್ಟಿ ಚಿನ್ನದ ಗಣಿ: ‘ಹಟ್ಟಿ ಪಟ್ಟಣದ ಪೈ ಭವನದಲ್ಲಿ ಹಾಕಿರುವ ಪಟಾಕಿ ಅಂಗಡಿಗಳು ಸರ್ಕಾರದ ನಿಯಮ ಮತ್ತು ನಿಬಂಧನೆಗಳನ್ನು ಪಾಲನೆ ಮಾಡುವಲ್ಲಿ ವಿಫಲವಾಗಿವೆ’ ಎಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ.

ಪಟಾಕಿ ಅಂಗಡಿ ಹಾಕಿಕೊಳ್ಳಬೇಕಾದರೆ ಜನವಸತಿಯಿಂದ ದೂರದ ಖಾಲಿ ಜಾಗದಲ್ಲಿ ಮಾಲೀಕರ ಅನುಮತಿ, ಜೆಸ್ಕಾಂ, ಅಗ್ನಿ ಶಾಮಕದಳದ ಪರವಾನಿಗೆ ಪಡೆಯಬೇಕು ಎನ್ನುವ ನಿಮಯಗಳು ಇವೆ. ಆದರೆ ಪೈ ಭವನದಲ್ಲಿ ಹಾಕಿರುವ 5 ಪಟಾಕಿ ಅಂಗಡಿಯವರು ನಿಯಮ ಪಾಲನೆ ಮಾಡುತ್ತಿಲ್ಲ ಎಂದು ಜನರ ಆರೋಪ.

ಜೆಸ್ಕಾಂನಿಂದ ಅನುಮತಿ ಪಡೆಯದೇ ಅಕ್ರಮವಾಗಿ ಪಟಾಕಿ ಅಂಗಡಿ ಮಾಲೀಕರು ವಿದ್ಯುತ್ ಕಳ್ಳತನ ಮಾಡಿಕೊಂಡಿದ್ದಾರೆ. ಪಟಾಕಿ ದಾಸ್ತನು ಇರಿಸಿದ ಮತ್ತು ಮಾರಾಟ ಮಾಡುವ ಜಾಗ, ಅಂಗಡಿ ಮತ್ತು ಮನೆಗಳ ನಡುವೆ 15 ಮೀಟರ್ ಅಂತರವಿರಬೇಕು ಎಂಬ ನಿಯಮ ಇದೆ.

ಪಟಾಕಿ ಅಂಗಡಿಗಳ ಬಗ್ಗೆ ನಿಯಮಗಳ ಬಗ್ಗೆ ಪೊಲೀಸರನ್ನು ವಿಚಾರಿಸಿದರೆ, ‘ಇದರ ಬಗ್ಗೆ ನಮಗೇನು ಗೊತ್ತಿಲ್ಲ. ಪಂಚನಾಮೆ ಮಾಡಿಕೊಂಡಿ ಮೇಲಧಿಕಾರಿಗಳು ತಿಳಿಸಿದ್ದಾರೆ, ಅದರ ಪ್ರಕಾರ ವರದಿ ಮಾಡಿಕೊಡಲಾಗಿದೆ’ ಎಂದು ಹಟ್ಟಿ ಠಾಣೆಯ ಪೋಲಿಸರು ಜಾರಿಕೊಳ್ಳುತ್ತಿದ್ದಾರೆ.

ಪರಿಸರಕ್ಕೆ ಹಾನಿಕಾರಕ ಪಟಾಕಿ ಮಾರಾಟ ಮಾಡದಂತೆ ನಿರ್ಬಂಧ ಇದ್ದರೂ ಅವುಗಳನ್ನೇ ಮಾರಾಟ ಮಾಡಲಾಗುತ್ತಿದೆ. ನಿಯಮ ಪಾಲನೆ ಮಾಡದ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ. ಸಂಬಂದಪಟ್ಟ ಮೇಲಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಇಲ್ಲಿನ ಜನರು.

Highlights - ಪಂಚಾನಾಮೆ ಮಾಡದೇ ವರದಿ ಸಲ್ಲಿಕೆ ಪಟಾಕಿ ಅಂಗಡಿಗಳ ಅನುಮತಿ ಪಡೆಯುವ ಮುನ್ನ ಸ್ಧಳದ ಪಂಚನಾಮೆ ಜವಾಬ್ದಾರಿ ಹೊತ್ತ ಹಟ್ಟಿ ಪೋಲಿಸರು ನಿಯಮ ಪಾಲನೆ ಬಗ್ಗೆ ಪರಿಶೀಲನೆ ಮಾಡದೆ ಪಟಾಕಿ ಮಾರಾಟ ಮಾಡಲು ಪಟ್ಟಣದ ಪೈ ಭವನದಲ್ಲಿ ಪಂಚನಾಮೆ ವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸಿದ್ದಾರೆ. ‘ಪಟಾಕಿ ಅಂಗಡಿಗಳ ಅನತಿ ದೂರದಲ್ಲೇ 2 ವಿದ್ಯುತ್ ಪರಿವರ್ತಕಗಳು ಇವೆ. ರಾಜರೋಷವಾಗಿ ನಿಯಮಗಳನ್ನು ಗಾಳಿಗೆ ತೂರಿ ಪೊಲೀಸರು ಅಂಗಡಿ ಮಾಲೀಕರ ಜೊತೆ ಹೊಂದಾಣಿಕ ಮಾಡಿಕೊಂಡು ಒಂದೊಂದು ಅಂಗಡಿಯಿಂದ ₹50 ಸಾವಿರ ವ್ಯವಹಾರ ಮಾಡಿಕೊಂಡಿದ್ದಾರೆ’ ಎಂಬ ಶಂಕೆಯನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.

ಜಿಲ್ಲಾಧಿಕಾರಿಗಳಿಂದ ಪಟಾಕಿ ಅಂಗಡಿ ಇಡಲು ಮಾಲೀಕರು ಅನುಮತಿ ಪಡೆದಿದ್ದಾರೆ ನಿಯಮ ನಿಬಂಧನೆಗಳ ಪ್ರತಿಗಳನ್ನು ನಮಗೆ ನೀಡಿಲ್ಲ. ಪರಿಶೀಲಿಸಿದಾಗ ಎಲ್ಲವೂ ಸರಿಯಾಗಿ ಕಂಡು ಬಂದಿದೆ
ಹೊಸಕೆರಪ್ಪ ಹಟ್ಟಿ ಠಾಣೆಯ ಪಿಐ

ಪರಿಸರಕ್ಕೆ ಹಾನಿ ಮಾಡುವ ಪಟಾಕಿ ಮಾರಾಟ ಸರ್ಕಾರದ ನಿಯಮಗಳನ್ನು ಪಾಲನೆ ಮಾಡದ ಪಟಾಕಿ ಅಂಗಡಿ ಹಾಗೂ ಅಧಿಕಾರಿಗಳ ವಿರುದ್ದ ಮೇಲಾಧಿಕಾರಿಗಳು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು
ಚನ್ನಬಸವ ನಾಯಕ ಕೋಠಾ ಪರಿಸರ ಪ್ರೇಮಿ

ಪಟಾಕಿ ಅಂಗಡಿ ಮಾಲೀಕರು ತಾತ್ಕಾಲಿಕ ವಿದ್ಯುತ್ ಮೀಟರ್ ಪಡೆಯದೆ ಅಕ್ರಮವಾಗಿ ವಿದ್ಯುತ್ ಪಡೆದಿದ್ದರು ಅಂಥ ಸಂಪರ್ಕ ಸ್ಧಗಿತ ಮಾಡಲಾಗಿದೆ
ಅಮರಪ್ಪ ಜೆಸ್ಕಾಂ ಜೆಇ ಹಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.