ಅರ್ಥವಾಗದಿದ್ದರೆ ಶಿಕ್ಷಕರೊಂದಿಗೆ ಚರ್ಚಿಸಿದೆ: ಎಸ್.ಕೆ.ವಿಜಯಲಕ್ಷ್ಮೀ

ಬುಧವಾರ, ಮೇ 22, 2019
24 °C
ಎಸ್ಸೆಸ್ಸೆಲ್ಸಿ: ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ

ಅರ್ಥವಾಗದಿದ್ದರೆ ಶಿಕ್ಷಕರೊಂದಿಗೆ ಚರ್ಚಿಸಿದೆ: ಎಸ್.ಕೆ.ವಿಜಯಲಕ್ಷ್ಮೀ

Published:
Updated:

ಪ್ರತಿಭಾನ್ವಿತೆಯ ವಿವರ
ಹೆಸರು: ಎಸ್.ಕೆ.ವಿಜಯಲಕ್ಷ್ಮೀ
ತಂದೆ: ಶಿವಶರಣ ಕಣ್ಣೂರ್
ತಾಯಿ: ಶಿವಲಿಂಗಮ್ಮ
ಊರು: ಶಕ್ತಿನಗರ
ಶಾಲೆ: ಆರ್‌ಟಿಪಿಎಸ್‌ ದಯಾನಂದ ಆಂಗ್ಲೋ (ಡಿಎವಿ)ವೇದಿಕೆಯ ಆಂಗ್ಲಮಾಧ್ಯಮ ಪ್ರೌಢಶಾಲೆ.

ಶಕ್ತಿನಗರ: ಎಲ್ಲ ವಿಷಯಗಳನ್ನು ಪ್ರೀತಿಯಿಂದ ಮತ್ತು ಆಸಕ್ತಿಯಿಂದ ಓದುತ್ತಿದ್ದೆ. ಹೀಗಾಗಿ ಧೈರ್ಯದಿಂದ ಪರೀಕ್ಷೆ ಎದುರಿಸಲು ಸಾಧ್ಯವಾಯಿತು.

ಸಂಸ್ಕೃತ ಮತ್ತು ಸಾಮಾನ್ಯವಿಜ್ಞಾನ ನನಗೆ ಕಠಿಣ ವಿಷಯ ಅನ್ನಿಸಿತ್ತು. ಹೀಗಾಗಿ ಅವುಗಳ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಂಡೆ. ಶಾಲೆಯಲ್ಲಿ ನಡೆಸಿದ ನಾಲ್ಕು ಪೂರ್ವ ಸಿದ್ಧತಾ ಪರೀಕ್ಷೆಗಳು ಸಮಯ ಪರಿಪಾಲನೆ ಹಾಗೂ ಕಠಿಣ ಪ್ರಶ್ನೆಗಳನ್ನು ಎದುರಿಸುವ ಬಗ್ಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾದವು. ಪರೀಕ್ಷೆಯಲ್ಲಿ ಯಾವ ಪ್ರಶ್ನೆಗಳನ್ನು ಕೇಳಬಹುದು ಎಂದು ಹೇಳಿ ಬರೆಸುತ್ತಿದ್ದರು. ಯಾವುದೇ ವಿಷಯ ಕುರಿತು ಗೊಂದಲ ಉಂಟಾದರೆ, ಅರ್ಥವಾಗದಿದ್ದರೆ ತಕ್ಷಣ ಶಿಕ್ಷಕರೊಂದಿಗೆ ಚರ್ಚಿಸಿ ಅದನ್ನು ಪರಿಹರಿಸಿಕೊಳ್ಳುತ್ತಿದ್ದೆ.

ಇದರಿಂದ ಸಂಸ್ಕೃತ ಭಾಷೆ ವಿಷಯದಲ್ಲಿ 125 ಅಂಕಗಳ ಪೈಕಿ 125 ಅಂಕ ಪಡೆದಿದ್ದಾರೆ. ವಿಜ್ಞಾನ ವಿಷಯದಲ್ಲಿ 98 ಅಂಕ ಪಡೆದರೆ, ಕನ್ನಡ, ಇಂಗ್ಲಿಷ್, ಗಣಿತ ಮತ್ತು ಸಾಮಾನ್ಯವಿಜ್ಞಾನ ವಿಷಯದಲ್ಲಿ 100 ಅಂಕಗಳನ್ನು ಪಡೆಯುವುದಕ್ಕೆ ಶಾಲಾ ಶಿಕ್ಷಕರ ಮಾರ್ಗದರ್ಶನ ಕಾರಣ ಇದೆ.

2008 ರಿಂದ 2018ರವರೆಗಿನ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿದ್ದೆ. ಅದು ಅಲ್ಲದೆ ನಮ್ಮ ಪ್ರಾಂಶುಪಾಲರು ಯಾವ ರೀತಿ ಓದಬೇಕು ಎಂಬ ಬಗ್ಗೆ ವೇಳಾಪಟ್ಟಿ ಸಿದ್ಧಮಾಡಿಕೊಳ್ಳಲು ಸಲಹೆ ನೀಡಿದ್ದರು. ಅವರ ಸಲಹೆಯಂತೆ ಅದನ್ನು ಅನುಸರಿಸಿದೆ. ಯಾವುದೇ ಆತಂಕ ಒತ್ತಡಗಳಿಲ್ಲದೆ ಪರೀಕ್ಷೆಯನ್ನು ಎದುರಿಸಿದೆ. ನಿರೀಕ್ಷೆಯಂತೆ ಉತ್ತಮ ಅಂಕಗಳು ಬಂದವು.

ವಿಜ್ಞಾನ ಮತ್ತು ಗಣಿತ ವಿಷಯಗಳಿಗೆ ಟ್ಯೂಷನ್‌ಗೆ ಹೋಗುತ್ತಿದ್ದೆ. ಶಾಲಾ ಅವಧಿ ಮುಗಿದ ಬಳಿಕ ಮನೆಯಲ್ಲಿ ನಿರಂತರ ಅಧ್ಯಯನ ಮಾಡುತ್ತಿದ್ದೆ. ಮೊಬೈಲ್ ಮತ್ತು ಟಿವಿ ನಿಯಮಿತವಾಗಿ ನೋಡುತ್ತೇನೆ. ಪರೀಕ್ಷೆ ಸಮಯದಲ್ಲಿ ನಮ್ಮ ಮನೆಯಲ್ಲಿ ನನಗೆ ತುಂಬಾ ಪ್ರೋತ್ಸಾಹ ಸಿಕ್ಕಿದೆ.

ನನ್ನ ತಂದೆ ತಾಯಿ  ಇಂಟರ್‌ನೆಟ್‌ನಲ್ಲಿ ಹಳೆಯ ವಿಷಯ ಪತ್ರಿಕೆಗಳನ್ನು ತೆಗೆದುಕೊಡುತ್ತಿದ್ದರು. ನನಗೆ ಬೇಕಾದ ಪುಸ್ತಕ ಮತ್ತು ಜೆರಾಕ್ಸ್‌ಗಳನ್ನು ಅಣ್ಣನೇ ತೆಗೆದುಕೊಂಡು ಬರುತ್ತಿದ್ದ. ಇಷ್ಟೇ ಅಂಕ ಪಡೆಯಬೇಕು ಎಂಬ ಒತ್ತಡ ಇರಲಿಲ್ಲ. ಹೀಗಾಗಿ ನಿರಳವಾಗಿ ಓದಲು ಸಾಧ್ಯವಾಯಿತು.

ದೃಢವಾದ ಆತ್ಮವಿಶ್ವಾಸ, ಅಚಲ ಮನಸ್ಸು ಇದ್ದರೆ ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಆದರೆ, ಸಾಧಿಸುವ ಛಲ ಇರಬೇಕು. ನಾವು ಯಾವುದೇ ವಿಷಯವನ್ನು ಏಕಾಗ್ರತೆಯಿಂದ ಓದಿದರೆ ಅದು ಮನದಟ್ಟಾಗುತ್ತದೆ. ಅಗತ್ಯ ಬಿದ್ದರೆ ಓದಿಗೆ ಪೂರಕವಾಗಿ ಬಳಸಬೇಕು.

ಬಾಲ್ಯದಿಂದಲೇ ಚೆನ್ನಾಗಿ ಓದಬೇಕೆಂಬ ಆಕಾಂಕ್ಷೆ ಹೊಂದಿರುವೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 623(ಶೇ 99.68) ಅಂಕಗಳಿಸಿ ಜಿಲ್ಲೆಗೆ ಟಾಪರ್ ಆಗಿದ್ದು ಸಂತಸ ತಂದಿದೆ. ಪಿಯುಸಿಯಲ್ಲಿ (ವಿಜ್ಞಾನ) ಪದವಿ ಮುಗಿಸಿ,ಐಎಎಸ್‌  ಅಧಿಕಾರಿ ಆಗಬೇಕುಎನ್ನುವ ಹಂಬಲವಿದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !