ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು: ರೈಲ್ವೆ ಕೆಳ ಸೇತುವೆ ಉದ್ಘಾಟನೆ

Published 25 ಜನವರಿ 2024, 16:04 IST
Last Updated 25 ಜನವರಿ 2024, 16:04 IST
ಅಕ್ಷರ ಗಾತ್ರ

ರಾಯಚೂರು: ರೈಲ್ವೆ ಇಲಾಖೆಯಿಂದ ರಾಯಚೂರು ತಾಲ್ಲೂಕಿನ ಮಟಮಾರಿಯಲ್ಲಿ ₹ 5 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ರೈಲ್ವೆ ಕೆಳ ಸೇತುವೆಯನ್ನು ಗುರುವಾರ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

ಸಂಸದ ರಾಜಾ ಅಮರೇಶ್ವರ ನಾಯಕ ಉದ್ಘಾಟಿಸಿದರು. ಈ ಸೇತುವೆಯು 45 ಗ್ರಾಮಗಳ ಅಂತರವನ್ನು ಕಡಿಮೆ ಮಾಡಿದೆ. ಮಟಮಾರಿ, ಗಿಲ್ಲೆಸೂಗೂರ, ದಿನ್ನಿ ಮತ್ತು ಮಂತ್ರಾಲಯಕ್ಕೆ ತೆರಳುವವರಿಗೆ ದಾರಿ ಸರಳವಾಗಿದೆ. 30 ವರ್ಷಗಳ ಜನರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ರಾಜಾ ಅಮರೇಶ್ವರ ನಾಯಕ ಅವರು ಕೇಂದ್ರ ರೈಲ್ವೆ ಸಚಿವರಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.

ಶಾಸಕ ಡಾ.ಶಿವರಾಜ ಪಾಟೀಲ, ರೈಲ್ವೆ ಬೋರ್ಡ್‌ ಸದಸ್ಯ ಬಾಬುರಾವ್, ಮುಕ್ತಿಯಾರ್ ಅಹಮ್ಮದ್, ರೈಲ್ವೆ ಇಲಾಖೆಯ ಶ್ರೀ ಕೃಷ್ಣಪ್, ಸಿರಾಜ್ ಅಹ್ಮದ್ ಎ.ಎನ್, ತೇಜೇಶ್ವರ ರೆಡ್ಡಿ, ಉರುಕುಂದಪ್ಪ ನಾಯಕ, ಬಸವನಗೌಡ, ಮಹಾಂತೇಶ ಸ್ವಾಮಿ, ಬಸವರಾಜ ನಾಯಕ ಅಸ್ಕಿಹಾಳ, ವೆಂಕಟೇಶ್ ನಾಯಕ ಗಾರಲದಿನ್ನಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT