ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುರಕುಂದಾ ಪಶು ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಒತ್ತಾಯ

Published 5 ಜುಲೈ 2024, 15:43 IST
Last Updated 5 ಜುಲೈ 2024, 15:43 IST
ಅಕ್ಷರ ಗಾತ್ರ

ಸಿರವಾರ: ತಾಲ್ಲೂಕಿನ ಕುರುಕುಂದಾ ಪಶು ಆಸ್ಪತ್ರೆಗೆ ವೈದ್ಯರ ನೇಮಕ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ) ಬಣದ ಪದಾಧಿಕಾರಿಗಳು ತಾಲ್ಲೂಕು ಪಶು ಆಸ್ಪತ್ರೆ ಸಿಬ್ಬಂದಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿದರು.

ಗ್ರಾಮೀಣ ಭಾಗದ ಜಾನುವಾರುಗಳಿಗೆ ಹರಡುವ ಸಾಂಕ್ರಾಮಿಕ ರೋಗಗಳಿಂದ ರಕ್ಷಿಸಲು ಪಶುವೈದ್ಯರ ನೇಮಕ ಅಗತ್ಯ ಇದೆ. ಕೇವಲ ಆಸ್ಪತ್ರೆ ಕಟ್ಟಡವಿದ್ದರೆ, ಅನುಕೂಲ ಆಗುವುದಿಲ್ಲ ಹಾಗಾಗಿ ತಕ್ಷಣ ಪಶುವೈದ್ಯರನ್ನು ನೇಮಕ ಮಾಡಿ ಹಳ್ಳಿಯ ಜಾನುವಾರುಗಳನ್ನು ರಕ್ಷಣೆ ಮಾಡಬೇಕು ಎಂದು ಪಶು ಇಲಾಖೆ ಸಹಾಯಕ ನಿರ್ದೇಶಕರಿಗೆ ಬರೆದ ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.

ಕರವೇ ತಾಲೂಕು ಘಟಕದ ಅಧ್ಯಕ್ಷ ಕೆ.ರಾಘವೇಂದ್ರ, ಪಟಕನದೊಡ್ಡಿ ಗ್ರಾಮ ಘಟಕದ ಅಧ್ಯಕ್ಷ ಸಂಜೀವ ನಾಯಕ, ಉಪಾಧ್ಯಕ್ಷ ಹನುಮೇಶ ಶಾಖಾಪುರ, ಹನುಮೇಶ ಪಟಕನದೊಡ್ಡಿ, ಹನುಮಂತ ಸಿರವಾರ, ಭೀಮರಾಜ, ಯಲ್ಲಪ್ಪ, ರಮೇಶ ಮಡ್ಡಿ, ಸುರೇಶ ಮಡಿಕೇರ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT