ಮುದಗಲ್: ಸಂಪೂರ್ಣ ಒಳ ಮೀಸಲಾತಿ ಜಾರಿಗೆಗಾಗಿ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯಿಂದ ಪಟ್ಟಣದ ನಿರುಪಾದೇಶ್ವರ ಪೆಟ್ರೋಲ್ ಬಂಕ್ ಹತ್ತಿರ ಬೆಳಗಾವಿ-ಹೈದರಾಬಾದ್ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಿದರು.

ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ನರಸಪ್ಪ ದಂಡೋರ,‘ಪರಿಶಿಷ್ಟ ಜಾತಿ ಒಳ ಮೀಸಲಾತಿ ಸಂಪೂರ್ಣ ಜಾರಿ ಮಾಡಬೇಕು. ಆಂಧ್ರಪ್ರದೇಶ, ತೆಲಂಗಾಣ ಮತ್ತು ಹರಿಯಾಣ ಸರ್ಕಾರದಲ್ಲಿ ಒಳ ಮೀಸಲಾತಿ ಜಾರಿ ಮಾಡಿದಂತೆ ಕರ್ನಾಟಕದಲ್ಲಿ ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು.

‘ರಾಜ್ಯ ಸರ್ಕಾರ ಹೋರಾಟವನ್ನು ಹತ್ತಿಕ್ಕಲು ಪೊಲೀಸರನ್ನು ದುರ್ಬಳಕೆ ಮಾಡಿಕೊಂಡಿದೆ. ರಾಜ್ಯದಲ್ಲಿ ನಡೆಯುತ್ತಿರುವ ಒಳ ಮೀಸಲಾತಿ ಹೋರಾಟಗಾರನ್ನು ಬಂಧನ ಮುಕ್ತ ಮಾಡಬೇಕು. ಚಳಿಗಾಲದ ಅಧಿವೇಶನದಲ್ಲಿ ಒಳ ಮೀಸಲಾತಿ ಸಂಪೂರ್ಣ ಜಾರಿಗೊಳಿಸಲು ಬಿಲ್ ಪಾಸ್ ಮಾಡಬೇಕು. 30 ವರ್ಷಗಳಿಂದ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ನ್ಯಾಯಬದ್ಧ ಹೋರಾಟ ಮಾಡುತ್ತ ಬಂದಿದ್ದೇವೆ. ಆದರೂ ನಮಗೆ ನ್ಯಾಯ ಸಿಕ್ಕಿಲ್ಲ’ ಎಂದರು.

‘ನಾವು ಯಾರ ಓಲೈಕೆಗೆ ಬಗ್ಗುವುದಿಲ್ಲ. ಈ ವಿಷಯದಲ್ಲಿ ನಮ್ಮ ಸಹನೆ ಕಟ್ಟೆ ಒಡೆದಿದೆ. ಮಾದಿಗರಿಗೆ ನಿರಂತರ ಅನ್ಯಾಯವಾಗುತ್ತಿದೆ. ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಸಮುದಾಯ ಸಿಡಿದೆದ್ದಿದೆ. ಇದರಿಂದಾಗಿ ಒಳ ಮೀಸಲಾತಿ ಜಾರಿ ಮಾಡಬೇಲಿ ಎಂದು ಆಗ್ರಹಿಸಿದರು.

ರಸ್ತೆ ಬಂದ್ ಮಾಡಿ ಟೈಯರ್ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆಯಲ್ಲಿ ಹೋರಾಟಗಾರರು ಕುಳಿತು ಸರ್ಕಾರ ವಿರುದ್ಧ ಘೋಷಣೆ ಕುಗಿದರು. ಪ್ರತಿಭಟನೆ ಮಾಡಿದರಿಂದ ಕೆಲ ಕಾಲ ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಯಿತು. ಪೊಲೀಸರು ಪ್ರತಿಭಟನಕಾರರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಿ, ಪೊಲೀಸ್ ವಾಹನದಲ್ಲಿ ಲಿಂಗಸುಗೂರಿಗೆ ಕರೆದುಕೊಂಡು ಹೋದರು. ನಂತರ ಬಿಡಗಡೆ ಮಾಡಿದರು.

ರಾಯಚೂರು ಜಿಲ್ಲಾ ಘಟಕದ ಅಧ್ಯಕ್ಷ ಮಾನಪ್ಪ ಮೇಸ್ತಿ, ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷ ಕಾಶಪ್ಪ ಗಿಣಿಗೇರ್, ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ಗಂಗಣ್ಣ, ನವ ಭಾರತ ಹಿಂದೂ ದಲಿತ ಸಂಘದ ಮುದಗಲ್ ಘಟಕದ ಅಧ್ಯಕ್ಷ ರವಿ ಕಟ್ಟಿಮನಿ, ರಾಘವೇಂದ್ರ ಕುದುರೆ, ಮೋಹನ್ ಬಂಡಾರಿ, ವೆಂಕಟೇಶ ಹಿರೇಮನಿ, ಸುರೇಶ ಬಂಡಾರಿ, ಬಸವರಾಜ ಬಂಕದಮನಿ, ಬಸವರಾಜ ಹಿರೇಮನಿ, ಹನುಮಂತ ಬಿಲ್ಲಿ, ರಾಘವೇಂದ್ರ ಹವಳೇ, ಮರಿಸ್ವಾಮಿ ದೇವರಮನಿ ಇತರರು ಹಾಜರಿದ್ದರು.

ಡಿವೈಎಸ್. ಪಿ ದತ್ತಾತ್ರಯ ಕಾರ್ನಾಡ್, ಮಸ್ಕಿ ಸಿಪಿಐ ಬಾಲಚಂದ್ರ ಲಕ್ಕಂ, ಪಿ.ಎಸ್.ಐಗಳಾದ ವೆಂಕಟೇಶ ಮಾಡಗೇರ ಬಂದೋಬಸ್ತ್ ಒದಗಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.