ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದಗ್ರಹಣ: ಗುರುತಿನ ಚೀಟಿ ವಿತರಣೆ

Last Updated 27 ಸೆಪ್ಟೆಂಬರ್ 2021, 2:32 IST
ಅಕ್ಷರ ಗಾತ್ರ

ಲಿಂಗಸುಗೂರು: ‘ಕಲ್ಯಾಣ ಕರ್ನಾಟಕವು ಜಾನಪದ ಸಾಹಿತ್ಯದ ತವರು ಎಂದು ಗುರುತಿಸಿಕೊಂಡಿದೆ’ ಎಂದು ಹಟ್ಟಿಚಿನ್ನದ ಗಣಿ ಆಡಳಿತ ಮಂಡಳಿ ಅಧ್ಯಕ್ಷ ಮಾನಪ್ಪ ವಜ್ಜಲ ಹೇಳಿದರು.

ಭಾನುವಾರ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ತಾಲ್ಲೂಕು ಪದಾಧಿಕಾರಿಗಳ ಪದಗ್ರಹಣ, ಕಲಾವಿದರಿಗೆ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಲೆ, ಸಂಸ್ಕೃತಿ ಜಾನಪದ ಸೊಗಡು ಮೈದುಂಬಿಕೊಂಡಿದ್ದರು ಕೂಡ ಈ ಭಾಗದ ಕಲಾವಿದರು ಮುಖ್ಯ ವಾಹಿನಿಗೆ ಬರದೆ ಹೋಗಿರುವುದು ನೋವಿನ ಸಂಗತಿ. ಕಲಾವಿದರು ಸಂಘಟಿತರಾಗಿ ಈ ಭಾಗದ ಕಲೆ, ಸಂಸ್ಕೃತಿಗಳನ್ನು ಪ್ರತಿಬಿಂಬಿಸಲು ಮುಂದಾದರೆ ತಾವು ಸಹಕಾರ ನೀಡುವೆ’ ಎಂದರು.

ಪಿಎಸ್‍ಐ ಪ್ರಕಾಶರೆಡ್ಡಿ ಡಂಬಳ, ಕಲ್ಯಾಣ ಕರ್ನಾಟಕ ಕಲಾವಿದರ ಸಂಘ ರಾಜ್ಯ ಘಟಕ ಅಧ್ಯಕ್ಷ ಪ್ರಕಾಶ ಅಂಗಡಿ ಮಾತನಾಡಿ, ‘ಕಲೆ, ಸಾಹಿತ್ಯ ಯಾರ ಸ್ವತ್ತು ಅಲ್ಲ. ನಿರಂತರ ಅಧ್ಯಯನದಿಂದ ಸಮಾಜದಲ್ಲಿನ ವಿವಿಧ ಬಗೆಯ ಕಲೆ ಸಂಸ್ಕೃತಿ, ಸಾಹಿತ್ಯದ ಅಭಿವೃದ್ಧಿಗೆ ತಾವುಗಳು ಶ್ರಮಿಸಬೇಕು. ಸರ್ಕಾರ ಈ ಭಾಗದ ಕಲಾವಿದರ ಪ್ರೋತ್ಸಾಹಿಸಲು ಮುಂದಾಗಬೇಕು’ ಎಂದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್‍ ಕಮಿಟಿ ರಾಜ್ಯ ಸದಸ್ಯ ಶರಣಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು.

ಮುದನೂರ ಸಿದ್ಧ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವದಿಸಿದರು.

ಶರಣ ಸಂಗಪ್ಪ ಆನೆಹೊಸೂರು ನೇತೃತ್ವ ವಹಿಸಿದ್ದರು. ಜಾನಪದ ಪರಿಷತ್ತು ತಾಲ್ಲೂಕು ಮಹಿಳಾ ಘಟಕ ಅಧ್ಯಕ್ಷೆ ಲಕ್ಷ್ಮೀದೇವಿ ನಡುವಿನಮನಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಪ್ರಕಾಶ್ಯ ನಂದಿ. ತಾಲ್ಲೂಕು ಘಟಕ ಅಧ್ಯಕ್ಷ ಮಂಜುನಾಥ ಗುಡದನಾಳ, ಗೌರವಾಧ್ಯಕ್ಷ ಲಂಕೆಪ್ಪ ಭಜಂತ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT