ಜಾಲಹಳ್ಳಿ(ರಾಯಚೂರು): ಸಮೀಪದ ಜಾನಮರಡಿ ಗ್ರಾಮದಲ್ಲಿ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಪೊಲೀಸರು ಭಾನುವಾರ ದಾಳಿ ನಡೆಸಿ 12 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಿಬ್ಬಂದಿ ನೇತೃತ್ವದ ತಂಡ ಹಾಗೂ ಜಾಲಹಳ್ಳಿ ಪಿಎಸ್ಐ ವೈಶಾಲಿ ನೇತೃತ್ವದ ತಂಡ ದಾಳಿ ಮಾಡಿದೆ. ₹1.10 ಲಕ್ಷ ನಗದು ಹಾಗೂ 43 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ.
ಜಪ್ತಿ ಮಾಡಿದ ಬಹುತೇಕ ವಾಹನಗಳಿಗೆ ವಿಮೆ ಮಾಡಿಸಿಲ್ಲ. ತಕ್ಷಣ ಬೈಕ್ ಮಾಲೀಕರನ್ನು ಕರೆದು ವಿಮಾ ಕಂತು ಪಾವತಿಸಲು ಸೂಚಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.