ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬಕ್ಕೆ ಚಾಲನೆ

Published 21 ಜೂನ್ 2024, 5:19 IST
Last Updated 21 ಜೂನ್ 2024, 5:19 IST
ಅಕ್ಷರ ಗಾತ್ರ

ರಾಯಚೂರು: ಕಾಪು ಸಮಾಜ ವತಿಯಿಂದ ಆಯೋಜಿಸಿರುವ ಮೂರು ದಿನಗಳ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬಕ್ಕೆ ಶುಕ್ರವಾರ ಚಾಲನೆ ದೊರೆಯಿತು.

ರಾಜೇಂದ್ರ ಗಂಜ್‌ನಲ್ಲಿ ಮೊದಲ ದಿನ ಕರ್ನಾಟಕದ ಎತ್ತುಗಳಿಂದ 1.50 ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆ ಆರಂಭವಾಯಿತು. ರಾಜ್ಯದ ವಿವಿಧ ಜಿಲ್ಲೆಗಳ ರೈತರು ಹೆಸರು ನೋಂದಾಯಿಸಿಕೊಂಡಿದ್ದು, ಸ್ಪರ್ಧೆ ಮಂದುವರಿದಿದೆ.

ಎತ್ತುಗಳ ಮಾಲೀಕರು ಮರದ ಗಾತ್ರದ ನೊಗಕ್ಕೆ ಪೂಜೆ ಸಲ್ಲಿಸಿ ಸ್ಪರ್ಧಾ ಸ್ಥಳಕ್ಕೆ ತಂದರು. ಎತ್ತುಗಳಿಗೆ ಬಲವಾಗಿ ಹಾಕಿದ್ದ ಮೂಗುದಾರವನ್ನು ಹಿಡಿದು ಸ್ಪರ್ಧಾ ಕಣಕ್ಕೆ ತಂದರು. ಎತ್ತುಗಳ ಹೆಗಲ ಮೇಲೆ ನೊಗವನ್ನಿಟ್ಟು ಭಾರದ ಕಲ್ಲಕ್ಕೆ ಕಟ್ಟಿದ್ದ ಸರಪಳಿಗೆ ಜೋಡಿಸಿ ಎತ್ತುಗಳಿಂದ ಎಳೆಸಿದರು.

ಎತ್ತುಗಳ ಅಂಕಣ ಬಿಟ್ಟು ಹೊರ ಹೋಗದಂತೆ ಎರಡೂ ಬದಿಗೆ ಬೊಂಬುಗಳನ್ನು ಬ್ಯಾರಿಕೇಡ್‌ನಂತೆ ಕಟ್ಟಲಾಗಿತ್ತು. ಜನರು ಕಟ್ಟಡಗಳ ಮಾಳಿಗೆಗಳ ಮೇಲೆ ಕುಳಿತು ದೃಶ್ಯವನ್ನು ವೀಕ್ಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT