ರಾಯಚೂರು: ತಾಲ್ಲೂಕಿನ ಮಲಿಯಾಬಾದ್ ಸಮೀಪ ರಾಯಚೂರು–ಮಂತ್ರಾಲಯ ರಸ್ತೆಯ ಬದಿಯಲ್ಲಿರುವ ಕೆಎಸ್ಸಿಎ ಕ್ರಿಕೆಟ್ ಮೈದಾನ ಆವರಣ ಗೋಡೆಯನ್ನು ಭೂವಿವಾದದ ಕಾರಣ ಜೆಸಿಬಿಯಿಂದ ಕೆಡವಲಾಗಿದೆ.

13 ವರ್ಷಗಳ ಹಿಂದೆ ದಾನಿಯೊಬ್ಬರು ಕೆಎಸ್ಸಿಎ ಕ್ರಿಕೆಟ್ ಮೈದಾನ ನಿರ್ಮಾಣಕ್ಕೆ 12 ಎಕರೆ ಜಾಗವನ್ನು ಮುಕ್ತವಾಗಿ ಕೊಟಿದ್ದಾರೆ. 12 ಎಕರೆಯಲ್ಲಿ 1.29 ಎಕರೆ ಕಡಿಮೆ ಬಂದ ಕಾರಣ ಹಾಗೂ ಭೂವಿಸ್ತೀರ್ಣದ ವಿವಾದ ಹಿನ್ನೆಯೆಲ್ಲಿ ಕೆಎಸ್ಸಿಯ ಆಡಳಿತ ಮಂಡಳಿಯವರು ಸರ್ವೆ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು.

ಸರ್ವೆ ಅಧಿಕಾರಿಗಳು ಸ್ಥಳಕ್ಕೆ ಬಂದು ಭೂಮಾಪನ ಮಾಡಿದ ನಂತರ 1.29 ಎಕರೆ ಕೆಎಸ್ಸಿಎ ಸೇರಿದ್ದು, ಎಂದು ಸ್ಪಷ್ಟ ಅಭಿಪ್ರಾಯ ಹೇಳಿದ್ದರು ಹೀಗಾಗಿ. ಕೆಎಸ್ಸಿಯ ಸ್ಥಳೀಯ ಆಡಳಿತ ಮಂಡಳಿಯವರು ನವೆಂಬರ್ 3 ರಂದು ಆವರಣ ಗೋಡೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದರು.

ಮೂಲ ಭೂಮಾಲೀಕರು ಎನ್ನಲಾದ ವಿಜಯಕುಮಾರ ಅವರು ನ.3ರಂದು ಸ್ಥಳಕ್ಕೆ ಬಂದು ಆವರಣ ಗೋಡೆ ನಿರ್ಮಾಣಕ್ಕೆ ಆಕ್ಷೇಪ ವ್ಯ್ಕತಪಡಿಸಿದ್ದರು. ನವೆಂಬರ್ 4ರಂದು ಬಂದು ಅಕ್ರಮವಾಗಿ ಮೈದಾನಪ್ರವೇಶ ಮಾಡಿ ₹ 4 ಲಕ್ಷ ಖರ್ಚು ಮಾಡಿ ನಿರ್ಮಿಸಿದ್ದ 130 ಮೀಟರ್ ಉದ್ದದ ಆವರಣ ಗೋಡೆ ಕೆಡವಿ ಹಾಕಿದ್ದಾರೆ ಎಂದು ವಿಜಯಕುಮಾರ ವಿರುದ್ಧ ಭೀಮಾಚಾರ್ಯ ಜಗನ್ನಾಥಾಚಾರ್ಯ ಯರಗೇರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.