ಮಂಗಳವಾರ, 17 ಫೆಬ್ರುವರಿ 2026
×
ADVERTISEMENT
PV Web Exclusive: ಲಿಂಗಸುಗೂರು ತಾಲ್ಲೂಕಿನಲ್ಲಿ ನಿಲ್ಲದ ಕಚೇರಿಗಳ ಸ್ಥಳಾಂತರ!
PV Web Exclusive: ಲಿಂಗಸುಗೂರು ತಾಲ್ಲೂಕಿನಲ್ಲಿ ನಿಲ್ಲದ ಕಚೇರಿಗಳ ಸ್ಥಳಾಂತರ!
ಲಿಂಗಸುಗೂರು ತಾಲ್ಲೂಕಿಗೆ ಬರೆ; ಜನರು ಹೈರಾಣ
ಫಾಲೋ ಮಾಡಿ
ನಾಗರಾಜ ಗೊರೆಬಾಳ
Published 23 ಜನವರಿ 2026, 11:47 IST
Last Updated 23 ಜನವರಿ 2026, 11:47 IST
Comments
ಕೃಷಿ ಉಪ ನಿರ್ದೇಶಕರ ಕಚೇರಿ
ಲಿಂಗಸುಗೂರಲ್ಲಿ 2014ರಲ್ಲಿ ಕೃಷಿ ಉಪ ನಿರ್ದೇಶಕರ-2 ಕಚೇರಿ ಸ್ಥಾಪನೆ ಮಾಡಲಾಗಿದೆ. ಇದಕ್ಕಾಗಿ ಸ್ವಂತ ಕಟ್ಟಡ ಕೂಡ ನಿರ್ಮಾಣ ಮಾಡಲಾಗಿದೆ. 2024ರಿಂದಲೂ ಈ ಕಚೇರಿಯನ್ನು ಸಿಂಧನೂರಿಗೆ ಸ್ಥಳಾಂತರಕ್ಕೆ ಸರ್ಕಾರದ ಮಟ್ಟದಲ್ಲಿ ಸಿಂಧನೂರಿನ ಚುನಾಯಿತ ಪ್ರತಿನಿಧಿಗಳು ನಿರಂತರವಾಗಿ ಒತ್ತಡ ಹಾಕುತ್ತಲೇ ಇದ್ದಾರೆ. ಆದರೆ ಅವರ ಕನಸು ಈಡೇರುತ್ತಿಲ್ಲ.
ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ಕಚೇರಿ ಸ್ಥಳಾಂತರ!
ಇಲ್ಲಿನ ಕಚೇರಿಗಳನ್ನು ಸಿಂಧನೂರಿಗೆ ಸ್ಥಳಾಂತರಿಸುವ ಹಿನ್ನಲೆಯಲ್ಲಿ ಸರ್ಕಾರದ ಮಟ್ಟದಲ್ಲಿ ಲಿಂಗಸುಗೂರು ತಾಲ್ಲೂಕಿನ ಭೌಗೋಳಿಕ ಸೇರಿದಂತೆ ಇತರೆ ಮಾಹಿತಿಗಳನ್ನು ಸುಳ್ಳು ಹೇಳಿ ಸರ್ಕಾರದ ಕಣ್ಣಿಗೆ ಮಣ್ಣರೆಚಿ ಕಚೇರಿ ಸ್ಥಳಾಂತರಕ್ಕೆ ಅಧಿಕಾರಿಗಳ ಮೂಲಕ ಪತ್ರ ಬರೆಸುತ್ತಿದ್ದಾರೆ.
ಜಿಲ್ಲಾ ಮಟ್ಟದ ಆಸ್ಪತ್ರೆ ಸಿಂಧನೂರಿಗೆ ಸ್ಥಳಾಂತರ ಮಾಡಿದ್ದಕ್ಕೆ ಅಧಿವೇಶನದಲ್ಲಿ ಹೋರಾಟ ಮಾಡಿದ್ದೇನೆ, ಬಿಜೆಪಿ ಶಾಸಕರ ಕ್ಷೇತ್ರ ಎಂಬ ಕಾರಣಕ್ಕೆ ಕಾಂಗ್ರೆಸ್ ಸರ್ಕಾರ ತಮ್ಮ ಸ್ವಪಕ್ಷದ ಕ್ಷೇತ್ರಕ್ಕೆ ಹಿತ ಕಾಯುವ ಕೆಲಸ ಮಾಡಿ ನಮ್ಮ ಕ್ಷೇತ್ರಕ್ಕೆ ಮೋಸ ಮಾಡುತ್ತಿದೆ. ಇಲ್ಲಿರುವ ಕಚೇರಿಗಳನ್ನು ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡುವ ದುಸ್ಸಾಹಸಕ್ಕೆ ಸರ್ಕಾರವಾಗಲಿ, ಪಕ್ಕದ ಚುನಾಯಿತ ಪ್ರತಿನಿಧಿಗಳಾಗಲಿ ಕೈ ಹಾಕಬಾರದು.
– ಮಾನಪ್ಪ ವಜ್ಜಲ್, ಶಾಸಕ ಲಿಂಗಸುಗೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT