ಶನಿವಾರ, ಜನವರಿ 18, 2020
20 °C

ವಿದ್ಯುತ್‌ ಸ್ಪರ್ಶ: ಲಾರಿ ಚಾಲಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಕ್ತಿನಗರ: ಇಲ್ಲಿಗೆ ಸಮೀಪದ ಡಾಬಾವೊಂದರ ಎದುರು ಲಾರಿ ನಿಲುಗಡೆ ಮಾಡಿಕೊಂಡು ವಿಶ್ರಾಂತಿಗಾಗಿ ಕ್ಯಾಬಿನ್‌ ಮೇಲೆ ಏರಿದ್ದ ಚಾಲಕನಿಗೆ ವಿದ್ಯುತ್‌ ಸ್ಪರ್ಶವಾಗಿ ಮೃತಪಟ್ಟಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.

ತಮಿಳುನಾಡಿನ ಪ್ರಭಾಕರನ್‌ (49) ಮೃತಪಟ್ಟಿರುವ ಚಾಲಕ. ಚಾಮರಾಜನಗರದಿಂದ ತೆಲಂಗಾಣದ ಮೆಹಬೂಬ್‌ನಗರಕ್ಕೆ ಹಾಲಿನ ಉತ್ಪನ್ನಗಳನ್ನು ಪೂರೈಕೆ ಮಾಡಿ, ವಾಪಸ್ಸಾಗುತ್ತಿದ್ದ ವೇಳೆ ಈ ಅವಘಡ ಉಂಟಾಗಿದೆ. ಜೊತೆಯಲ್ಲಿ ಸಹಚಾಲಕನಿದ್ದು, ಯಾವುದೇ ತೊಂದರೆ ಆಗಿಲ್ಲ.

ಶಕ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೋಮವಾರ ಬೆಳಿಗ್ಗೆ ರಿಮ್ಸ್‌ ಆಸ್ಪತ್ರೆಗೆ ಶವ ಸಾಗಿಸಲಾಯಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು