ಮಾನ್ವಿ: ‘ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಉತ್ತಮ ವ್ಯಕ್ತಿತ್ವ ಹಾಗೂ ಉನ್ನತ ಭವಿಷ್ಯ ರೂಪಿಸುವಲ್ಲಿ ಪ್ರಾಧ್ಯಾಪಕರ ಜವಾಬ್ದಾರಿ ಮಹತ್ವದ್ದಾಗಿದೆ’ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ರಝಾಕ್ ಉಸ್ತಾದ್ ಹೇಳಿದರು.

ಭಾನುವಾರ ಸಂಜೆ ಪಟ್ಟಣದ ಗ್ಯಾಲಕ್ಸಿ ಫಂಕ್ಷನ್ ಹಾಲ್ನಲ್ಲಿ ಭಾರತೀಯ ಐಟಿ ಉದ್ಯಮಗಳಲ್ಲಿ ಸೈಬರ್ ಅಪರಾಧಗಳ ನಿಯಂತ್ರಣಕ್ಕಾಗಿ ಕೃತಕ ಬುದ್ಧಿಮತ್ತೆಯ ಬಳಕೆ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿ, ಅಲಿಘಡ್ನ ಮಂಗಲಯಾತನ ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನ ವಿಭಾಗದ ವತಿಯಿಂದ ಪಿಎಚ್.ಡಿ ಪದವಿಗೆ ಭಾಜನರಾದ ಪ್ರಾಧ್ಯಾಪಕ ಸೈಯದ್ ಮಿನಾಜುಲ್ ಹಸನ್ ಅವರಿಗೆ ಗೆಳೆಯರು ಹಾಗೂ ವಿದ್ಯಾರ್ಥಿಗಳ ಬಳಗ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ತಮ್ಮ ವೃತ್ತಿಯ ಜತೆಗೆ ನೂರಾರು ಯುವಕರಿಗೆ ಆರ್ಥಿಕ ನೆರವು, ತರಬೇತಿ ಹಾಗೂ ವೃತ್ತಿ ಬದುಕು ಕಟ್ಟಿಕೊಟ್ಟ ಪ್ರಾಧ್ಯಾಪಕ ಸೈಯದ್ ಮಿನಾಜುಲ್ ಹಸನ್ ಅವರ ಸೇವೆ ಶ್ಲಾಘನೀಯ’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಾಧ್ಯಾಪಕ ಡಾ.ರವಿ ಮಸ್ಕಿ ಅವರು ಸೈಬರ್ ಅಪರಾಧಗಳ ನಿಯಂತ್ರಣ ಕುರಿತು ಡಾ.ಮಿನಾಜುಲ್ ಹಸನ್ ಅವರು ಕೈಗೊಂಡಿರುವ ಸಂಶೋಧನೆ ಕುರಿತು ವಿವರಿಸಿದರು.
ಮುಖಂಡರಾದ ಹ್ಯಾರಿಸ್ ಸಿದ್ದಿಕಿ, ಸಾಜಿದ್ ಖಾದ್ರಿ, ಖಾಲೀದ್ ಖಾದ್ರಿ, ಸುರೇಶ ಕುರ್ಡಿ, ಆರಿಫ್ ಮಿಯಾ ಚಾಗಬಾವಿ, ತಾಯಪ್ಪ ಬಿ.ಹೊಸೂರು, ಮೊಹಮ್ಮದ್ ಸಾಜಿದ್ ರಾಯಚೂರು, ಮಹಾಂತೇಶ ಓಲೇಕಾರ, ನಿವೃತ್ತ ಶಿಕ್ಷಕರಾದ ಹುಸೇನಪ್ಪ ಕುರ್ಡಿ, ಮಧುಕುಮಾರಿ ಪಾಂಡೆ, ಮಹಿಮೂದಾ ಬೇಗಂ ಮತ್ತಿತರರು ಮಾತನಾಡಿದರು.
ಪಟ್ಟಣದ ಹಲವಾರು ಗಣ್ಯರು, ಸಂಘ ಸಂಸ್ಥೆಗಳ ಮುಖಂಡರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಸೈಯದ್ ಮಿನಾಜುಲ್ ಹಸನ್ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.
ಶಿಕ್ಷಕ ಅಬ್ದುಲ್ ಯೂನುಸ್ ಅಭಿನಂದನಾ ಭಾಷಣ ಮಾಡಿದರು. ವಕೀಲ ಸೈಯದ್ ತನ್ವೀರುಲ್ ಹಸನ್ ಕಾರ್ಯಕ್ರಮ ಉದ್ಘಾಟಿಸಿದರು. ಯುವ ಮುಖಂಡ ಮಹಮ್ಮದ್ ಬೇಗ್ ಸಂವಿಧಾನ ಪೀಠಿಕೆ ಬೋಧಿಸಿದರು.
ಹಸನ್ ಕುಟುಂಬದ ಸದಸ್ಯರಾದ ಸೈಯದ್ ಶಮಶೀರುಲ್ ಹಸನ್, ಸೈಯದ್ ಸರ್ಫರಾಜುಲ್ ಹಸನ್, ಶೇಖ್ ಅಲಿ ಮತ್ತಿತರರು ಉಪಸ್ಥಿತರಿದ್ದರು. ಎಂ.ಎ.ಎಚ್.ಮುಖೀಮ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಿಕ್ಷಕ ಅಜಗರ್ ಅಲಿ ನಿರೂಪಿಸಿದರು. ಉಪನ್ಯಾಸಕ ಮಹಿಬೂಬ್ ಮದ್ಲಾಪುರ ಸ್ವಾಗತಿಸಿದರು
ಪ್ರಾಧ್ಯಾಪಕ ಸೈಯದ್ ಮುಜೀಬ್ ಅಹ್ಮದ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.