ಮಸ್ಕಿ: ವಕ್ಫ್ ತಿದ್ದುಪಡಿ ಕಾಯ್ದೆ ಜಾರಿ ಮಾಡಿದ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಮಂಗಳವಾರ ಮುಸ್ಲಿಂ ಪಂಚ ಕಮಿಟಿ ನೇತೃತ್ವದಲ್ಲಿ ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಲಾಯಿತು.

ಜಮೀಯಾ ಮಸೀದಿಯಿಂದ ಆರಂಭವಾದ ಮೆರವಣಿಗೆಯು, ಡಾ. ಖಲೀಲ್ ವೃತ್ತ, ದೈವದಕಟ್ಟೆ, ತೇರು ಬಜಾರ, ಕನಕವೃತ್ತದ ಮೂಲಕ ಸಾಗಿ ಹಳೆಯ ಬಸ್ ನಿಲ್ದಾಣದ ಬಳಿಯ ಡಾ. ಅಂಬೇಡ್ಕರ್ ಪ್ರತಿಮೆ ಸ್ಥಳಕ್ಕೆ ಆಗಮಿಸಿತು.

ಮುಸ್ಲಿಂ ಸಮಾಜದ ಮುಖಂಡರು ಹಾಗೂ ನೂರಾರು ಯುವಕರು ಕಪ್ಪು ಪಟ್ಟಿ ಧರಿಸಿದ್ದರು. ಕೇಂದ್ರ ಸರ್ಕಾರದ ವಕ್ಪ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಭಿತ್ತಿ ಪತ್ರ ಹಿಡಿದು ಸಾಗಿದರು.

ಡಾ.ಅಂಬೇಡ್ಕರ್ ಪ್ರತಿಮೆ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸಮಾಜದ ಅನೇಕ ಮುಖಂಡರು ಕೇಂದ್ರ ಸಂಸತ್ನಲ್ಲಿ ಅಂಗೀಕರಿಸಿದ ವಕ್ಫ್ ತಿದ್ದುಪಡಿ ಮಸೂದೆಯನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿದರು. ರಾಷ್ಟ್ರಪತಿಗಳು ವಕ್ಪ್ ತಿದ್ದುಪಡಿ ಕಾಯ್ದೆಯನ್ನು ರದ್ದುಪಡಿಸಬೇಕು ಎಂದು ಮನವಿ ಮಾಡಿದರು.

ಪಂಚ ಕಮಿಟಿ ಅಧ್ಯಕ್ಷ ಅಬ್ದುಲ್ ಅಜೀಜ್, ಜಮೀಯಾ ಕಮಿಟಿ ಅಧ್ಯಕ್ಷ ಮಹ್ಮದ್ ಸಾಬ, ಜಿಲಾನಿ ಖಾಜಿ, ಅಬ್ದುಲ್ ಗನಿ, ಬಾಹರ್ ಅಲಿ, ರಿಯಾಜ್ ಖಾಜಿ, ಮೌಲಾಸಾಬ, ಮುಕ್ತಿ ಅಶೀಕ್ ಸಾಬ, ಖದೀರಿ ಚೌದ್ರಿ, ಶಬ್ಬೀರ್ ಚೌದ್ರಿ, ಇಂದರ ಪಾಷಾ, ರಿಯಾಜ್ ಸಾಬ, ಖಾಜಿ ಅದಮ್ ಸಾಬ, ರಿ ಮಸೂದ್ ಪಾಷಾ, ರಜಾಕ್ ಪಾಷಾ, ನೂರು ಅಹ್ಮದ್, ಸೈಯದ್ ರಸೂಲ್, ಚಾಂದ್ ಶೆಡಮಿ, ರಾಜಾ ನದಾಪ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.