ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಸ್ಕಿ | ಕಾನ್ಸ್‌ಟಬಲ್ ಮೇಲೆ ಹಲ್ಲೆ: ಅಪರಾಧಿಗೆ ಒಂದು ವರ್ಷ ಶಿಕ್ಷೆ

Published 29 ಜೂನ್ 2024, 15:46 IST
Last Updated 29 ಜೂನ್ 2024, 15:46 IST
ಅಕ್ಷರ ಗಾತ್ರ

ಮಸ್ಕಿ: ಸ್ಥಳೀಯ ಠಾಣೆಯ ಪೊಲೀಸ್ ಕಾನ್ಸ್‌ಟಬಲ್ ಮೇಲೆ ಹಲ್ಲೆ ನಡೆಸಿದ್ದ ತಾಲ್ಲೂಕಿನ ಆಶಿಹಾಳ ತಾಂಡಾ ನಿವಾಸಿ ಮುರಳಿ ಕೃಷ್ಣ ರಾಠೋಡಗೆ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ದೊಡ್ಡ ಬಸವರಾಜ ಅವರು ಶುಕ್ರವಾರ ₹25 ಸಾವಿರ ದಂಡ, ಒಂದು ವರ್ಷ ಜೈಲು ಶಿಕ್ಷೆ ನೀಡಿ ಆದೇಶಿಸಿದ್ದಾರೆ. 

2018ರಲ್ಲಿ ರಾತ್ರಿ ಪಟ್ಟಣದಲ್ಲಿ ತಪಾಸಣೆ ನಡೆಸುತ್ತಿದ್ದ ಸಮಯದಲ್ಲಿ ಹೆಡ್‌ಕಾನ್ಸ್‌ಟಬಲ್ ಬಸವರಾಜ, ಕಾನ್ಸ್‌ಟಬಲ್ ಎಚ್. ಬಸವರಾಜ ಎಂಬುವರಿಗೆ ಮೇಲೆ ಮುರಳಿ ಕೃಷ್ಣ ಅವ್ಯಾಚ್ಚ ಶಬ್ದಗಳಿಂದ ನಿಂದಿಸಿ, ಎಳೆದಾಡಿ, ಜೀವ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT