ಸೋಮವಾರ, ಮೇ 17, 2021
22 °C

ಶೀಘ್ರದಲ್ಲಿಯೇ ಬಸನಗೌಡ ಯತ್ನಾಳ ಹುಚ್ಚಾಸ್ಪತ್ರೆಗೆ: ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂಧನೂರು: ‘ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಸದ್ಯದಲ್ಲೇ ಹುಚ್ಚಾಸ್ಪತ್ರೆಗೆ ಸೇರಲಿದ್ದಾರೆ. ಅವರ ಹೇಳಿಕೆಗಳು ಯಾವ ನಾಯಕರು ಮೆಚ್ಚುವಂತಿಲ್ಲ‘ ಎಂದು ಶಾಸಕ ರೇಣುಕಾಚಾರ್ಯ ಟೀಕಿಸಿದರು.

ನಗರದ ಕೋಟೆ ಬಡಾವಣೆಯಲ್ಲಿರುವ ಬಸಪ್ಪಯ್ಯಸ್ವಾಮಿ ಸಾಲಿಮಠ ಅವರ ನಿವಾಸದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ‘ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಜನರು ಬಿಜೆಪಿಗೆ ಮತ ಹಾಕುತ್ತಾರೆ’ ಎಂದರು.

‘ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಗ್ಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ಅವರು ಹಗುರವಾಗಿ ಮಾತನಾಡುತ್ತಿದ್ದಾರೆ. ಉಪ ಚುನಾವಣೆಗಳ ನಂತರ ಪಕ್ಷದಲ್ಲಿ ಬಿರುಕು ಉಂಟಾಗುವುದಿಲ್ಲ. ಸಚಿವ ಸ್ಥಾನಕ್ಕಾಗಿ ಯಾರು ಕಿತ್ತಾಡುವುದಿಲ್ಲ. ಪಕ್ಷ ಸಂಘಟನೆಗೆ ಶಾಸಕರು ದುಡಿಯುತ್ತೇವೆ’ ಎಂದರು. ಜಂಗಮ ಸಮಾಜದ ಮುಖಂಡರಾದ ಬಸವರಾಜ್ ಬಾದರ್ಲಿ ಹಿರೇಮಠ, ಬಸಪ್ಪಯ್ಯಸ್ವಾಮಿ ಸಾಲಿಮಠ, ಕುಮಾರ್, ಶ್ರೀಕಾಂತ್ ಹಿರೇಮಠ್, ಶಶಿಧರ್ ಹಿರೇಮಠ್, ಆದಿಬಸವ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು