ಮಸ್ಕಿ (ರಾಯಚೂರು): ‘ಮಸ್ಕಿ ಪಟ್ಟಣದ 2ನೇ ವಾರ್ಡ್ ಸೋಮನಾಥ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತದಾರರಿಗೆ ತಲಾ ₹ 2 ಸಾವಿರ ಹಂಚುತ್ತಿರುವ ವಿಡಿಯೊ ಸೆರೆಯಾಗಿದೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದರು.

ಸುದ್ದಿಗಾರರ ಎದುರು ಗುರುವಾರ ವಿಡಿಯೊ ದೃಶ್ಯಾವಳಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ‘ಮಸ್ಕಿಯ ಎಲ್ಲ ಬೂತ್ಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಣ ಹಂಚುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಬಂದಿರುವುದೇ ಹಣ ಹಂಚುವುದಕ್ಕಾಗಿ. ಕಾರು ಮತ್ತು ಹೆಲಿಕಾಪ್ಟರ್ ಮೂಲಕ ಹಣ ತಂದಿರಬಹುದು. ತುರ್ವಿಹಾಳದಿಂದಲೂ ಕಾಂಗ್ರೆಸ್ ಕಾರ್ಯಕರ್ತರು ಮಸ್ಕಿಗೆ ಬಂದು ಹಣ ಹಂಚುತ್ತಿದ್ದಾರೆ. ಹಣ ಹಂಚುತ್ತಿರುವ ಮೂರು ವಿಡಿಯೊ ತುಣುಕುಗಳನ್ನು ಬಿಡುಗಡೆ ಮಾಡಿದ್ದೇವೆ’ ಎಂದರು.

‘ಇದರ ಸಂಪೂರ್ಣ ತನಿಖೆಯನ್ನು ಚುನಾವಣಾಧಿಕಾರಿಗಳು ಮಾಡಬೇಕು. ಇದಕ್ಕೆ ಸಂಬಂಧಿಸಿ ದೂರು ಸಲ್ಲಿಸಲಾಗುತ್ತಿದೆ. ಡಿ.ಕೆ.ಶಿವಕುಮಾರ ಬಂದ ನಂತರವೇ ಮಸ್ಕಿ ಪಟ್ಟಣ ಮತ್ತು ಗ್ರಾಮೀಣ ಭಾಗಗಳಲ್ಲಿ ಹಣ ಹಂಚಿಕೆ ಜೋರಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.