ಮಸ್ಕಿ (ರಾಯಚೂರು): ಮಸ್ಕಿ ವಿಧಾನಸಭೆ ಉಪಚುನಾವಣೆಗೆ ಶನಿವಾರ ಮತದಾನ ನಡೆಯುತ್ತಿದ್ದು, ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಎರಡು ಕಡೆಗೆ ‘ಸಖಿ’ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಮತಗಟ್ಟೆಗಳ ವಿಶೇಷ ಅಲಂಕಾರವು ಗಮನ ಸೆಳೆಯುತ್ತಿದೆ.

ಮಸ್ಕಿ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಶುಕ್ರವಾರ ಗುಲಾಬಿ ವರ್ಣದಲ್ಲಿ ಮುಳುಗಿಸಲಾಗಿತ್ತು. ‘ಪಿಂಕ್ ಬೂತ್’ ಹೆಸರಿಗೆ ತಕ್ಕಂತೆ ಗುಲಾಬಿ ವರ್ಣವೈವಿಧ್ಯದಲ್ಲಿ ಅಲಂಕಾರ ಮಾಡಲಾಗಿದ್ದು, ಕಾಲೇಜು ಮೂಲ ಕಟ್ಟಡ ಎಲ್ಲಿದೆ ಎಂದು ಹುಡುಕಾಟ ಮಾಡುವಷ್ಟು ಬದಲಾವಣೆ ಆಗಿದೆ. ಮತಗಟ್ಟೆಗೆ ಮತದಾರರು ಪ್ರವೇಶಿಸುವ ದ್ವಾರದಿಂದ ಹಿಡಿದು ಹೊರಾಂಗಣ ಮತ್ತು ಒಳಾಂಗಣವೆಲ್ಲವೂ ಅಲಂಕಾರದಿಂದ ಕೂಡಿದೆ.

ಈ ಮತಗಟ್ಟೆಗೆ ವಿಶೇಷ ವಿದ್ಯುತ್ ದೀಪಾಲಂಕಾರ ಕೂಡಾ ಮಾಡಲಾಗಿದೆ. ಶುಕ್ರವಾರ ಸಂಜೆಯಿಂದಲೇ ಮತಗಟ್ಟೆಯು ಝಗಮಗಿಸುವ ದೃಶ್ಯಾವಳಿಯನ್ನು ಜನರು ನಿಂತು ಕಣ್ತುಂಬಿ ಕೊಳ್ಳುತ್ತಿರುವುದು ಕಂಡುಬಂತು. ವಿವಿಧ ವರ್ಣಗಳ ವಿದ್ಯುತ್ ದೀಪಾಲಂಕಾರವು ಮತದಾನದ ದಿನದ ಮೆರುಗು ಹೆಚ್ಚಿಸಿವೆ.

ಏನಿದು ಸಖಿ: ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಮತಗಟ್ಟೆಗಳನ್ನು ಸಖಿ ಮತಗಟ್ಟೆಗಳೆಂದು ಗುರುತಿಸಲಾಗುತ್ತದೆ. ಮಸ್ಕಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಎರಡು ಮತಗಟ್ಟೆಗಳನ್ನು ಸಖಿ ಮತಗಟ್ಟೆಗಳೆಂದು ಗುರುತಿಸಿ ವಿಶೇಷವಾದ ಅಲಂಕಾರಕ್ಕೆ ಕ್ರಮ ಕೈಗೊಳ್ಳಲಾಗಿದೆ.

ತುರ್ವಿಹಾಳದ ಗ್ರಾಮ ಪಂಚಾಯಿತಿ ಕಟ್ಟಡದ ಮತಗಟ್ಟೆ ಕೂಡಾ ಸಖಿ ಮತಗಟ್ಟೆಯಾಗಿದ್ದು, ಅದನ್ನು ಅಲಂಕೃತಗೊಳಿಸಲಾಗಿದೆ. ಈ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಸುವ ಎಲ್ಲ ಸಿಬ್ಬಂದಿಯು ಮಹಿಳೆಯರೆ ಆರುವುದು ವಿಶೇಷ. ಮತಪಟ್ಟಿಯಲ್ಲಿ ಕ್ರಮ ಸಂಖ್ಯೆ ನೋಡಿ ಹೆಸರು ಪತ್ತೆ ಮಾಡುವುದು,ಭಾವಚಿತ್ರ, ವಿಳಾಸವನ್ನು ಪರಿಶೀಲಿಸಿ ಎಡಗೈತೋರು ಬೆರಳಿಗೆ ಶಾಹಿ ಹಚ್ಚುವುದು, ಇವಿಎಂ, ವಿವಿಪ್ಯಾಟ್ ಯಂತ್ರಗಳ ತಿಳಿವಳಿಕೆ ನೀಡುವುದು.. ಇತ್ಯಾದಿ ಎಲ್ಲವನ್ನು ಮಹಿಳಾ ಅಧಿಕಾರಿಗಳೆ ನಿರ್ವಹಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.