ಬುಧವಾರ, ಮಾರ್ಚ್ 3, 2021
30 °C
ಮಿರ್ಜಾ ಅಸಾದುಲ್ಲಾ ಖಾನ್ ಗಾಲಿಬ್ ಅವರ 223ನೇ ಜನ್ಮಾದಿನಾಚರಣೆ

ಕಠಿಣ ಪರಿಶ್ರಮದಿಂದ ಗುರಿ ಸಾಧಿಸಿ: ಮಲ್ಲಿಕಾರ್ಜುನಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಮಿರ್ಜಾ ಗಾಲಿಬ್ ಅವರು ಒಬ್ಬ ಶ್ರೇಷ್ಠ ಗಜಲ್ ಕವಿಯಾಗಿದ್ದು, ಉರ್ದು ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾಗಿದೆ. ಒಬ್ಬ ವ್ಯಕ್ತಿಯ ಸಾವಿನ ನಂತರೂ ನೆನೆಯಬೇಕಾದರೆ ಅಂತಹ ಸಾಧನೆ ಹಾಗೂ ಅವರ ಕೊಡುಗೆಯಿಂದ ಮಾತ್ರ ಇದು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಹೇಳಿದರು.

ನಗರದ ಕೇಂದ್ರ ಬಸ್ ನಿಲ್ದಾಣದ ಬಳಿಯ ಗಾಲಿಬ್ ಮೆಮೊರಿಯಲ್ ಟ್ರಸ್ಟ್ ನ ನವೀಕರಿಸಿದ ಗ್ರಂಥಾಲಯ ಉದ್ಘಾಟನೆ, ಮಿರ್ಜಾ ಅಸಾದುಲ್ಲಾ ಖಾನ್ ಗಾಲಿಬ್ ಅವರ 223ನೇ ಜನ್ಮಾದಿನಾಚರಣೆ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಲ್ಲಾ ಧರ್ಮಗಳ ಸಾರ ಒಂದೆಯಾಗಿದೆ. ಸಭ್ಯತೆ, ಸಂಸ್ಕೃತಿ, ಮಾನವೀಯ ಮೌಲ್ಯಗಳಗಳ ಅಳವಡಿಸಿಕೊಳ್ಳಬೇಕು. ಕಳೆದು ಹೊದ ಸಮಯ ಮರಳಿ ಬಾರದು, ಓದು ಮನುಷ್ಯನ ಜೀವನ ಹಸನಾಗಿ ಮಾಡುತ್ತದೆ. ವಿದ್ಯಾರ್ಥಿಗಳು ಜೀವನದಲ್ಲಿ ಒಂದು ಗುರಿ ಇರಬೇಕು. ಗುರಿ ಸಾಧನೆಗೆ ಕಠಿಣ ಶ್ರಮಪಟ್ಟರೆ ಯಶಸ್ವಿಯಾಗಲು ಸಾಧ್ಯ ಎಂದರು.

ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿ ಸಂಚಾಲಕ ರಜಾಕ್ ಉಸ್ತಾದ್ ಮಾತನಾಡಿ, ಶಿಕ್ಷಣದ ಕುರಿತು ಸಮಾಜದಲ್ಲಿ ಅರಿವು ಮೂಡಿಸಲು ಗಾಲಿಬ್ ಮೆಮೊರಿಯಲ್ ಟ್ರಸ್ಟ್ ಸ್ಥಾಪಿಸಲಾಗಿದೆ. ಸಮಾಜದ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಸಲು ಅವರಿಗೆ ಉಚಿತ ತರಬೇತಿ ನೀಡಲು ಉದ್ದೇಶಿಸಿದ್ದು, ಇದಕ್ಕಾಗಿ ಈಗಾಗಲೇ ಸಾವಿರಾರು ಪುಸ್ತಕಗಳನ್ನು ಖರೀದಿಲಾಗಿದೆ ಎಂದು ಹೇಳಿದರು.

ಈ ವೇಳೆ ಎ.ಜೆ.ಅಕಾಡೆಮಿ ನಿರ್ದೇಶಕ ಮೊಹಮ್ಮದ್ ಅಬ್ದುಲ್ಲಾ ಜಾವಿದ್, ಗಾಲಿ‌ಬ್ ಮೆಮೊರಿಯಲ್ ಟ್ರಸ್ಟ್ ನ ಅಧ್ಯಕ್ಷ ಸೈಯದ್ ತಾರಿಖ್ ಹಸನ್ ರಝ್ವಿ, ನೂರ್ ಮೊಹಮ್ಮದ್, ಖೈಸರ್ ರಜಾಕ್ ಮೊಹಿಯುದ್ದೀನ್, ಅಬ್ದುಲ್ ರಹೀಮ್ ಖಾನ್, ಮಲ್ಲಿಕಾರ್ಜುನ, ಅನ್ವರ್ ವಹೀದ್‌ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು