ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಸ್ಥಿರ

ಡೊಣಮೆಣಸಿನಕಾಯಿ ಪ್ರತಿ ಕೆ.ಜಿಗೆ ₹ 80
Published 2 ಜೂನ್ 2024, 5:35 IST
Last Updated 2 ಜೂನ್ 2024, 5:35 IST
ಅಕ್ಷರ ಗಾತ್ರ

ರಾಯಚೂರು: ಮುಂಗಾರು ಪ್ರವೇಶ ಮಾಡುವ ಮೊದಲೇ ಕೆಲ ತರಕಾರಿಗಳ ಬೆಲೆ ಕಡಿಮೆಯಾಗಿದೆ. ಬಹುತೇಕ ತರಕಾರಿಗಳ ಬೆಲೆ ಸ್ಥಿರವಾಗಿದೆ. ಹವಾಮಾನದಲ್ಲಿ ಹೆಚ್ಚಿನ ಬದಲಾವಣೆಯಾಗದಿದ್ದರೆ ಇದೇ ಬೆಲೆ ಮುಂದುವರಿಯಲಿದೆ.

ಪ್ರತಿ ಕ್ವಿಂಟಲ್‌ ಹಸಿ ಮೆಣಸಿನಕಾಯಿ, ಕುಂಬಳಕಾಯಿ, ಗಜ್ಜರಿಗೆ ₹ 2 ಸಾವಿರ ಹಾಗೂ ಎಲೆಕೋಸು ₹ 1 ಸಾವಿರ ಹೆಚ್ಚಾಗಿದೆ. ಬೀಟ್‌ರೂಟ್, ಎಲೆಕೋಸು, ಹಿರೇಕಾಯಿ, ಸೌತೆಕಾಯಿ, ಹಾಗಲಕಾಯಿ ಹಾಗೂ ಮೆಂತೆ ಸೊಪ್ಪಿನ ಬೆಲೆ ಸ್ಥಿರವಾಗಿದೆ.

ಈರುಳ್ಳಿ ಬೀನ್ಸ್, ಟೊಮೆಟೊ, ಬದನೆಕಾಯಿ. ತೊಂಡೆಕಾಯಿ, ಚವಳೆಕಾಯಿ, ತುಪ್ಪದ ಹಿರೇಕಾಯಿ, ಚವಳೆಕಾಯಿ ಬೆಲೆ ಕಡಿಮೆಯಾಗಿದೆ.

ನಾಸಿಕ್‌, ಸೋಲಾಪುರದಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಆವಕವಾಗಿದೆ. ಆಂಧ್ರಪ್ರದೇಶ, ತೆಲಂಗಾಣದ ಜಿಲ್ಲೆಗಳಿಂದ ಹಿರೇಕಾಯಿ, ಗಜ್ಜರಿ,  ಅವರೆಕಾಯಿ,  ಸೋರೆಕಾಯಿ, ಸೌತೆಕಾಯಿ, ಎಲೆಕೋಸು, ಹೂಕೋಸು ಹಾಗೂ ಸೊ‍ಪ್ಪು, ಬೆಳಗಾವಿ ಜಿಲ್ಲೆಯಿಂದ ಹಸಿ ಮೆಣಸಿನಕಾಯಿ, ಕೊತ್ತಂಬರಿ, ಮೆಂತೆ ಸೊಪ್ಪು ಇಲ್ಲಿನ ತರಕಾರಿ ಸಗಟು ಮಾರುಕಟ್ಟೆಗೆ ಬಂದಿದೆ.

‘ಒಂದು ವಾರ ಅಲ್ಲಲ್ಲಿ ಮಳೆ ಸುರಿದಿರುವ ಕಾರಣ ಕೆಲ ತರಕಾರಿಗಳ ಬೆಲೆ ಕಡಿಮೆಯಾಗಿದೆ. ಬಿಸಿಲು ಕಡಿಮೆಯಾಗಿರುವ ಕಾರಣ  ತರಕಾರಿ ಕೊಳ್ಳುವವರಿಗೆ ಹೆಚ್ಚು ಸಮಸ್ಯೆಯಾಗಿಲ್ಲ. ಎರಡು ವಾರ ತರಕಾರಿ ಬೆಲೆ ಸ್ಥಿರವಾಗಿರುವ ಸಾಧ್ಯತೆ ಇದೆ

‘ಎರಡು ವಾರ ತರಕಾರಿ ಬೆಲೆ ಇಳಿಯುವ ಲಕ್ಷಣಗಳು ಇಲ್ಲ. 45 ದಿನಗಳ ನಂತರ ತರಕಾರಿ ಬೆಲೆಯಲ್ಲಿ ಕಡಿಮೆಯಾಗಲಿದೆ. ಮಳೆ ಬಾರದಿದ್ದರೆ ದರ ಹೆಚ್ಚಳವಾಗಲಿದೆ’ ಎಂದು ತರಕಾರಿ ವ್ಯಾಪಾರಿ ಕೆ.ಶಶಿಕುಮಾರ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT