ಶುಕ್ರವಾರ, ಮೇ 7, 2021
26 °C

ಮುದಗಲ್ ತಾಲ್ಲೂಕು ಕೇಂದ್ರ ಘೋಷಣೆಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುದಗಲ್: ಮುದಗಲ್ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕೆಂದು ಮುದಗಲ್ ಬಿಜೆಪಿ ಮಂಡಲದಿಂದ ಹಾಗೂ ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಮಾನಪ್ಪ ಡಿ.ವಜ್ಜಲರವರ ನೇತೃತ್ವದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

ಮುದಗಲ್ ಕೋಟೆ ಉತ್ಸವ, ಬಸ್ ಡಿಪೋ, ಅಗ್ನಿಶಾಮಕ ಠಾಣೆ ಮಂಜೂರಾತಿ, ಪಟ್ಟಣದ ಕಸಾಯಿಖಾನೆ ಸ್ಥಳಾಂತರ, ನಗರದ ಮುಖ್ಯ ರಸ್ತೆಗೆ ಅನುದಾನ ಒದಗಿಸುವುದು, ಐತಿಹಾಸಿಕ ಕೋಟೆ ಜೀರ್ಣೋದ್ಧಾರ, ಲಿಂಗಸುಗೂರು ನಗರಕ್ಕೆ ಆರ್.ಟಿ.ಒ ಕಚೇರಿ ಮಂಜೂರಾತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ಮನವಿ ಮಾಡಿದರು.

ಮುದಗಲ್ ಬಿಜೆಪಿ ಘಟಕದ ಅಧ್ಯಕ್ಷ ಸಿದ್ದಯ್ಯ ಗ್ಯಾನಪ್ಪಯ್ಯನವರ, ಪುರಸಭೆ ಸದಸ್ಯರಾದ ಉದಯ ಕುಮಾರ, ನವನೀತ ಶೇಠ, ಮಹ್ಮದ ರಫೀ, ಫಕೀರಪ್ಪ ಕುರಿ, ಸಂತೋಷ ಸುರಪುರ ಮುಖಂಡರಾದ ಚಂದಾವಲಿಸಾಬ, ಮಲ್ಲಪ್ಪ ಮಾಟೂರ, ಮೌನೇಶ ಕಟ್ಟಿಮನಿ, ಈರಣ್ಣ ಕಟ್ಟಿಮನಿ, ಮಂಜುನಾಥ ನಂದವಾಡಗಿ, ಮಹಿಬೂಬಸಾಬ ಡೋಂಗ್ರಿ, ನಾಗರಾಜ ಯಾದವ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು