ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ವಿಹಾಳ: ಹಿಂದೂ–ಮುಸ್ಲಿಮರ ಅಲೈ ಕುಣಿತ

Last Updated 10 ಆಗಸ್ಟ್ 2022, 4:48 IST
ಅಕ್ಷರ ಗಾತ್ರ

ತುರ್ವಿಹಾಳ: ಮೊಹರಂ ಹಬ್ಬದ ಕೊನೆಯ ದಿನವಾದ ಮಂಗಳವಾರ ಪಟ್ಟಣ ಸೇರಿದಂತೆ ಹಲವು ಗ್ರಾಮಗಳಲ್ಲಿ ಅಲೈ ದೇವರುಗಳ ಮೆರವಣಿಗೆಯನ್ನು ಸಂಭ್ರಮದಿಂದ ನಡೆಸಲಾಯಿತು.

ಪಟ್ಟಣದ ಮೌಲಾಲೀ ಹಾಗೂ ಮುಲ್ಲಾರ್ ಮಸೀದಿಗಳಲ್ಲಿ ಪ್ರತಿಷ್ಠಾಪಿಸಲಾದ ದೇವರುಗಳ ಮೆರವಣಿಗೆಗೆ ಶಾಸಕ ಆರ್.ಬಸನಗೌಡ ತುರ್ವಿಹಾಳ, ಅಮರಗುಂಡಯ್ಯ ಶಿವಾಚಾರ್ಯರು, ಚಿದಾನಂದಯ್ಯ ಗುರುವಿನ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ‘ಹಿಂದೂ-ಮುಸ್ಲಿಮರು ಭಾವೈಕ್ಯ ಹಾಗೂ ಸೌಹಾರ್ದತೆಯಿಂದ ದೇವರುಗಳ ಮುಂದೆ ಕುಣಿಯಬೇಕು’ ಎಂದು ಮನವಿ ಮಾಡಿದರು.

ಹಳೆ ಬಜಾರ್‌ನಲ್ಲಿ ಎರಡೂ ಮಸೀದಿಯ ದೇವರುಗಳ ಸಮಾಗಮದ ದೃಶ್ಯ ನೋಡಲು ಸಾವಿರಾರರು ಜನರು ಸೇರಿದರು. ದೇವರುಗಳ ಮುಂದೆ ಅಲೈ ಕುಣಿಯುತ್ತಾ ಕನಕದಾಸ ವೃತ್ತ, ಬಸ್ ನಿಲ್ದಾಣದ ಮೂಲಕ ಈದ್ಗಾ ಮೈದಾನದಲ್ಲಿ ದಫನ್ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT