ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವರಾತ್ರಿ ಉತ್ಸವಕ್ಕೆ ಮೆರುಗು ತಂದ ಮುನ್ನೂರು ಕಾಪು ಸಮಾಜ: ಶಾಂತಪ್ಪ 

Published 19 ಅಕ್ಟೋಬರ್ 2023, 16:04 IST
Last Updated 19 ಅಕ್ಟೋಬರ್ 2023, 16:04 IST
ಅಕ್ಷರ ಗಾತ್ರ

ರಾಯಚೂರು: ಸಾಂಸ್ಕೃತಿಕ ಪರಂಪರೆ ರಕ್ಷಣೆಯೊಂದಿಗೆ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುತ್ತಿರುವ ಮುನ್ನೂರುಕಾಪು ಸಮಾಜ ಮಾದರಿಯಾಗಿದೆ ಎಂದು ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಶಾಂತಪ್ಪ ಹೇಳಿದರು.

ನಗರದ ಗದ್ವಾಲ್ ರಸ್ತೆಯ ಶ್ರೀಮಾತಾ ಲಕ್ಷ್ಮಮ್ಮ ದೇವಿ ಹಾಗೂ ಶ್ರೀಕಾಳಿಕಾದೇವಿಯ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮುನ್ನೂರುಕಾಪು ಸಮಾಜ ಈ ಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವುದರ ಮೂಲಕ ನವರಾತ್ರಿ ಉತ್ಸವಕ್ಕೆ ಮೆರುಗು ನೀಡುತ್ತಿದೆ. ಮೂಲತಃ ಕೃಷಿಯನ್ನು ಅವಲಂಬಿತ ಮುನ್ನೂರುಕಾಪು ಸಮಾಜ ಶ್ರಮ, ವಿಶ್ವಾರ್ಹತೆ ಮತ್ತು ಸ್ವಾವಲಂಬಿ ಗುಣದಿಂದ ಇಂದು ಎಲ್ಲ ರಂಗಗಳಲ್ಲೂ ಪ್ರಬಲ ಸಮುದಾಯವಾಗಿ ಬೆಳೆದು ನಿಂತಿದೆ ಎಂದು ಹೇಳಿದರು.

ತೆಲಂಗಾಣದ ನೇರಡಗಂಬ ಪಶ್ಚಿಮಾದ್ರಿ ಸಂಸ್ಥಾನ ವಿರಕ್ತಮಠ  ಪಂಚಮ ಸಿದ್ದಲಿಂಗ ಮಹಾಸ್ವಾಮಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದ ಆಯೋಜಕ, ಮಾಜಿ ಶಾಸಕ ಎ. ಪಾಪಾರೆಡ್ಡಿ, ಬೆಲ್ಲಂ ನರಸರೆಡ್ಡಿ, ಬಂಗ್ಗಿ ನರಸರೆಡ್ಡಿ, ಆರ್. ಕೆ ಅಮರೇಶ, ಡಾ. ರಾಜೇಶ್ವರಿ, ಹನುಮಂತಪ್ಪ, ಗಾಧರ ಬೆಟ್ಟಪ್ಪ,  ಜಿ. ಶಿವಮೂರ್ತಿ, ಶೇಖರರೆಡ್ಡಿ, ಪಿ. ರಾಜುರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT