ಶನಿವಾರ, ಆಗಸ್ಟ್ 20, 2022
21 °C

ರಾಯಚೂರು: ಜಗಳ ಬಗೆಹರಿಸಲು ಬಂದ ಯುವಕನ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹತ್ಯೆಗೀಡಾದ ಯುವಕ ಶೇಕ್ ಬಡೇಸಾಬ್ ಅಲಿಯಾಸ್ ಸಲ್ಮಾನ್ ಮೆಹಬೂಬ್

ರಾಯಚೂರು: ಎರಡು ಗುಂಪಿನ ಮಧ್ಯೆ ಉಂಟಾಗಿದ್ದ ಜಗಳ ಬಗೆಹರಿಸಲು ಬಂದ ಯುವಕನನ್ನೇ ಮಾರಕಾಸ್ತ್ರದಿಂದ ಹತ್ಯೆ ಮಾಡಿದ ಘಟನೆ ನಗರದ ಗಂಗಾ ನಿವಾಸ ಪ್ರದೇಶದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

ಪಾರ್ ಕೋಟ್ ನಿವಾಸಿ ಶೇಕ್ ಬಡೇಸಾಬ್ ಅಲಿಯಾಸ್ ಸಲ್ಮಾನ್ ಮೆಹಬೂಬ್ (28) ಹತ್ಯೆಗೀಡಾದ ಯುವಕ. ಬೈಕ್ ನಿಲುಗಡೆ ವಿಚಾರವಾಗಿ ಯುವಕರ ಮಧ್ಯೆ ಜಗಳ ಆರಂಭವಾಗಿತ್ತು. ಅದರಲ್ಲಿ ಒಬ್ಬ ಯುವಕ ಮೃತ ಶೇಕ್ ಬಡೇಸಾಬ್‌ನನ್ನು ನೆರವಿಗಾಗಿ ಸ್ಥಳಕ್ಕೆ ಕರೆಸಿದ್ದ ಎನ್ನಲಾಗಿದೆ.

ವಿವಾದ ಆಲಿಸಲು ಬರುತ್ತಿದ್ದಂತೆ ನಾಲ್ಕು ಜನರ ಗುಂಪೊಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿದೆ ಎಂದು ತಿಳಿಸಲಾಗಿದೆ.

ಸದರ್ ಬಜಾರ್ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು